ಮಡಿಕೇರಿ, ಡಿ. 10: ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ವತಿಯಿಂದ ವಾಟ್ಸಾಪ್ ಮೂಲಕ ಜಿಲ್ಲಾಮಟ್ಟದ ಜಾನಪದ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯ ನಾಲ್ಕು ವಿಭಾಗಗಳಲ್ಲಿ ಒಟ್ಟು 13 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದು, ಮೂರು ಮಂದಿ ವಿಶೇಷ ಬಹುಮಾನಕ್ಕೆ ಆಯ್ಕೆ ಆಗಿದ್ದಾರೆ.

ಸುಮಾರು 130ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಕುಶಾಲನಗರ ಲಲಿತಾ ಸುಬ್ಬೇಗೌಡ ಪ್ರಥಮ, ಕುಂಜಿಲದ ಕೆ.ಎಂ. ಲೀಲಾ ದ್ವಿತೀಯ, ಮೇಕೇರಿಯ ಎ.ಕೆ. ಈಶ್ವರಿ ತೃತೀಯ ಸ್ಥಾನ ಪಡೆದಿದ್ದಾರೆ. ಕಿರಿಯರ ವಿಭಾಗದಲ್ಲಿ ಕುಶಾಲನಗರದ ಪ್ರಗತಿ ಪ್ರಥಮ, ಮಡಿಕೇರಿಯ ಸ್ವಪ್ನಾ ಮಧುಕರ್ ದ್ವಿತೀಯ, ಕುಶಾಲನಗರದ ಸೂರ್ಯತ್ರಿಭುವನ್ ತೃತೀಯ ಸ್ಥಾನಗಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ಒಡೆಯನಪುರದ ಸುರೇಶ್ ಮೊಗೇರಾ ಪ್ರಥಮ, ಪೊನ್ನಂಪೇಟೆಯ ಎಸ್.ಡಿ. ಗಿರೀಶ್ ದ್ವಿತೀಯ, ವೀರಾಜಪೇಟೆಯ ಆಯುಶ್ ತೃತೀಯ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಗೋಣಿಕೊಪ್ಪಲುವಿನ ಅಶ್ವಿನಿ ಪ್ರಥಮ, ಹೆಬ್ಬೆಟ್ಟಗೇರಿಯ ಗ್ರಂಥಾ ಕಾರ್ಯಪ್ಪ ದ್ವಿತೀಯ, ಮಡಿಕೇರಿಯ ಸ್ವಾತಿ ಸ್ವರೂಪ್ ಹಾಗೂ ಕರಿಕೆಯ ಕುದುಪಜೆ ಬೃಂದಾ ಕವನ್ ತೃತೀಯ ಸ್ಥಾನ ಗಳಿಸಿದ್ದಾರೆ. ವಿಶೇಷ ಬಹುಮಾನಕ್ಕೆ ಎಡಪಾಲದ ಕೆ.ಎಂ. ಸುಮಯ್ಯ, ಕೋಕೇರಿಯ ಸಿ.ಎ. ಉತ್ತಪ್ಪ, ಸುಂಟಿಕೊಪ್ಪದ ಫಿಲಿಕ್ಸ್ ಡಿಸೋಜ ಭಾಜನರಾಗಿದ್ದಾರೆ.

ಬಹುಮಾನ ವಿತರಣಾ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.