ಮಡಿಕೇರಿ, ಡಿ. 10: ಕುಟ್ಟ ಹೋಬಳಿಯ ಕೆ. ಬಾಡಗದ ಕುಟ್ಟ - ಕೆಂಬುಕೊಲ್ಲಿ ರಸ್ತೆಯಲ್ಲಿ ಆಲ್ಟೋ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದುದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಕಾರು ಹಾಗೂ ಮದ್ಯ ಸೇರಿ 1,52,700 ರೂ. ಮೌಲ್ಯದ ಮಾಲನ್ನು ವಶಪಡಿಸಿ ಕೊಂಡಿದ್ದು, ಆರೋಪಿ ಪರಾರಿಯಾಗಿ ದ್ದಾನೆ. ಕಾರ್ಯಾಚರಣೆಯಲ್ಲಿ ಅಬಕಾರಿ ಅಧೀಕ್ಷಕರಾದ ಭಾಗ್ಯ ಅವರ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಬಿ.ಎಸ್. ಮೋಹನ್ ಕುಮಾರ್, ಅಬಕಾರಿ ರಕ್ಷಕರಾದ ಗೋವಿಂದ ನಾಯ್ಕ್, ಎ. ನಂದಗೋಕುಲ, ಪ್ರದೀಪ್ ಮತ್ತು ಸುನಿಲ್‍ಕುಮಾರ್ ಹಾಗೂ ವಾಹನ ಚಾಲಕ ರಾಜೇಂದ್ರ ಪಾಲ್ಗೊಂಡಿದ್ದರು.