ನಾಪೆÇೀಕ್ಲು, ಡಿ. 10: ಹಾವುಗಳ ರಕ್ಷಕ ಬಿಟ್ಟಂಗಾಲದ ಪೊನ್ನೀರ ಸ್ನೇಕ್ ಗಗನ್ ಗೋಣಿಕೊಪ್ಪದ ಮುಕ್ಕಾಟೀರ ರವಿ ಎಂಬವರ ತೋಟದಲ್ಲಿದ್ದ ಸುಮಾರು 12 ಅಡಿಗಳಷ್ಟು ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಕಾಫಿ ತೋಟದಲ್ಲಿ ಕುರುಚಲು ಕಾಡುಗಳ ಮಧ್ಯ ಇದ್ದ ಹಾವನ್ನು ಹಿಡಿಯಲು ಅವರು ಹರಸಾಹಸಪಟ್ಟರು.

ಕೊನೆಗೂ 12 ಅಡಿ ಉದ್ದದ ಹಾವನ್ನು ಹಿಡಿದು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುತ್ತಾರೆ. ಪೊನ್ನೀರ ಗಗನ್ ಇದುವರೆಗೆ ಸುಮಾರು 55 ಕಾಳಿಂಗ ಸರ್ಪವನ್ನು ಮತ್ತು ಸುಮಾರು 6 ಸಾವಿರಕ್ಕೂ ಹೆಚ್ಚು ಇತರ ಹಾವುಗಳನ್ನು ರಕ್ಷಿಸಿದ್ದಾರೆ. ಅವರು ಹೇಳುವಂತೆ ಹಾವುಗಳು ಕ್ರೂರ ಪ್ರಾಣಿಯಲ್ಲ. ಅದಾಗಿಯೇ ಯಾರಿಗೂ ತೊಂದರೆ ಮಾಡಿದ ಉದಾಹರಣೆ ಕಡಿಮೆ ಎನ್ನುವ ಅವರು, ಹಾವುಗಳು ಕಂಡುಬಂದರೆ ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ. ಅವರನ್ನು ಸಂಪರ್ಕಿಸಲು ಮೊಬೈಲ್ ನಂ. 9945102695.