ವೀರಾಜಪೇಟೆ ವರದಿ, ಡಿ. 10: ಕಟ್ಟಡ ಕೆಲಸಗಳಿಗೆ ಬಳಸುವ ಸೆಂಟ್ರಿಂಗ್ ಕಬ್ಬಿಣದ ಹಲಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಗರ ಮತ್ತು ಗ್ರಾಮಾಂತರ ಠಾಣೆ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಆಲಂಗಾರ್ ಗ್ರಾಮದ ನಿವಾಸಿ ಉಮೇಶ್ ಪೂಜಾರಿ (42) ಮತ್ತು ಆತನ ಸಹಾಯಕ ರಾಮಪುಂಜ ಗ್ರಾಮದ ರವಿ ಪೂಜಾರಿ (28) ಬಂಧಿತ ಆರೋಪಿಗಳು.ಬಂಧಿತ ಆರೋಪಿಗಳು ಕಟ್ಟಡ ಗುತ್ತಿಗೆದಾರರಾಗಿದ್ದು, ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ವೀರಾಜಪೇಟೆ ತಾಲೂಕಿನ ಅಮ್ಮತಿ- ಕಾವಾಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಸೆಂಟ್ರಿಂಗ್‍ಗೆ ಬಳಸುವ ಕಬ್ಬಿಣದ ಹಲಗೆಗಳನ್ನು ತಂದಿರಿ ಸಲಾಗಿತ್ತು. 2019ರ ನವೆಂಬರ್ ತಿಂಗಳಿನಲ್ಲಿ 100 ಹಲಗೆಗಳು ಕಾಣೆಯಾಗಿದ್ದು, ನಂತರ ಅದೇ ಗ್ರಾಮದಲ್ಲಿ 2020 ಜನವರಿ ತಿಂಗಳಿ ನಲ್ಲಿ 60 ಹಲಗೆಗಳು ಕಾಣೆಯಾದ ಕುರಿತು ವೀರಾಜಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾ. 27.10.2020 ರಂದು ನಗರದಲ್ಲಿ ರೂ. 45 ಸಾವಿರ ಮೌಲ್ಯದ 15 ಪ್ಲೈವುಡ್ ಶೀಟುಗಳು ಕಳುವಾದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಾ. 9.12.2020 ರಂದು 85 ಸಾವಿರ ಮೌಲ್ಯದ 7.5 ಹೆಚ್.ಪಿ. ಕಿರ್ಲೋಸ್ಕರ್ ಜೆನರೇಟರ್ ಕಳುವಾದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.