ಕೂಡಿಗೆ, ಡಿ. 10: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಯಾದ ಸಮಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಕಂದಾಯವನ್ನು ಪೂರ್ತಿಯಾಗಿ ಸಂದಾಯ ಮಾಡಬೇಕಾದ ನಿಯಮವಿದೆ. ಚುನಾವಣೆ ಸ್ಪರ್ಧಿಸುವ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯವರು ಈಗಾಗಲೇ ಮನೆ ಮತ್ತು ನೀರಿನ ಕಂದಾಯವನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಅದರಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಇಲ್ಲಿಯವರೆಗೆ ಮೂರು ದಿನಗಳಲ್ಲಿ ಮೂರು ಲಕ್ಷದ ತೊಂಬತ್ತಾರು ಸಾವಿರ ರೂಪಾಯಿ ಸಂದಾಯವಾಗಿದೆ.
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮೂರು ಗ್ರಾಮಗಳನ್ನು ಒಳಗೊಂಡಿದೆ. ಆದರೆ ಜನಸಂಖ್ಯೆ ಹೆಚ್ಚು ಇರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ 23 ಆಗಿದೆ. ಚುನಾವಣೆ ಘೋಷಣೆ ಯಾಗಿ ನಾಮಪತ್ರ ಸ್ವೀಕರಿಸಲಾರಂಭ ವಾದ ದಿನದಿಂದ ಇಂದಿನವರೆಗೆ ರೂ. 3.96 ಲಕ್ಷ ಕಂದಾಯ ಸಂದಾಯ ವಾಗಿದೆ. ಕೂಡುಮಂಗಳೂರು-ಕೂಡಿಗೆ ಗ್ರಾಮ ಪಂಚಾಯಿತಿಗಳಲ್ಲಿ ಒಂದೂವರೆ ಲಕ್ಷದಷ್ಟು ಕಂದಾಯ ಸಂದಾಯವಾಗಿದೆ.
-ಕೆ.ಕೆ. ನಾಗರಾಜಶೆಟ್ಟಿ