ಮಡಿಕೇರಿ, ಡಿ. 9: ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ತ್ಯಾಜ್ಯದ ಪ್ರಮಾಣವೆಷ್ಟು? ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆಯೇ, ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ನಾರಾಯಣಗೌಡ ಅವರನ್ನು ವಿಧಾನ ಪರಿಷತ್ನಲ್ಲಿ ಪ್ರಶ್ನಿಸಿದರು.
ಸಚಿವ ಡಾ. ನಾರಾಯಣಗೌಡ ಅವರು ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 23 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪ್ರವಾಸಿಗರು ನಗರಕ್ಕೆ ಹೆಚ್ಚು ಆಗಮಿಸುವ ಕಾಲದಲ್ಲಿ ತ್ಯಾಜ್ಯ ಉತ್ಪಾದನೆಯ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಿರುವ ಸಾಧ್ಯತೆಗಳಿರುತ್ತದೆ ಎಂದರು.
ಹಾಲಿ ನಗರ ವ್ಯಾಪ್ತಿಯಲ್ಲಿ ಪ್ರತಿದಿನ 23 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಮಡಿಕೇರಿಯ ಕರ್ಣಂಗೇರಿ ಗ್ರಾಮದ ಸರ್ವೆ ನಂ. 471/ಐಪಿ16 ರಲ್ಲಿ 6 ಎಕರೆ ಸಂಸ್ಕರಣೆ ಜಾಗದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದಿರುವ ಅಧಿಕೃತ ಪತ್ರವನ್ನು ಅನುಸರಿಸಿ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು.
ಈ ಜಾಗದಲ್ಲಿ ಈಗಾಗಲೇ ವಾಚ್ಮೆನ್ ಶೆಡ್, ಎಲೆಕ್ಟ್ರಿಸಿಟಿ ಕನೆಕ್ಸನ್, ಬೋರ್ ವೆಲ್, 8 ಕಾಂಪೋಸ್ಟ್ ಪಿಟ್ಸ್ ಥರ್ಮಲ್ ಸ್ಕ್ರೀನ್ ಮತ್ತಿತರ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಹಾಲಿ ಲಭ್ಯವಿರುವ 8 ಕಂಪೋಸ್ಟ್ ಪಿಟ್ಸ್ಗಳಲ್ಲಿ ಹಸಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಸ್ಕರಣೆ ಮಾಡುವ ಸಲುವಾಗಿ ಏರಿಯೇಷನ್ ಹಾಗೂ ಲೀಚೆಟ್ ಕಲೆಕ್ಷನ್ ಸಿಸ್ಟಮ್ ಅಭಿವೃದ್ಧಿ ಪಡಿಸುವ ಕಾಮಗಾರಿಗಳು ಚಾಲನೆಯಲ್ಲಿರುತ್ತದೆ.
ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ವಿಕೇಂದ್ರೀಕೃತ ಸಂಸ್ಕರಣೆ ಮಾಡಲು ನಗರಸಭಾ ವ್ಯಾಪ್ತಿಯಲ್ಲಿ ಕೆಲವೊಂದು ಸ್ಥಳಗಳನ್ನು ಗುರುತಿಸಲಾಗಿದ್ದು, ವಿವರ ಇಂತಿದೆ. ದಾಸವಾಳ ರಸ್ತೆ. ಪಿ.ಐ.ಡಿ. ನಂ. 04-1-504-37, ವಿಸ್ತೀರ್ಣ 125x110 ಚದರ ಅಡಿಗಳು. ಹೆಲ್ತ್ ಕಚೇರಿ ಹತ್ತಿರ: ಪಿ.ಐ.ಡಿ. ನಂ.14-3-519-7, ವಿಸ್ತೀರ್ಣ 60x40 ಚದರ ಅಡಿಗಳು.
ಈ ಸ್ಥಳಗಳಲ್ಲಿ ಸುಮಾರು 6 ಟನ್ಗಳಷ್ಟು ಒಣ ತ್ಯಾಜ್ಯವನ್ನು ಸಂಸ್ಕರಿಸಲು 2 ಶೆಡ್ಗಳನ್ನು ರೂ. 30 ಲಕ್ಷಗಳ ಅಂದಾಜಿನಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ. ಈ ಘಟಕಗಳಲ್ಲಿ ಬೇಲಿಂಗ್ ಯಂತ್ರ ಹಾಗೂ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಒಣತ್ಯಾಜ್ಯ ಸಂಸ್ಕರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ತ್ಯಾಜ್ಯವನ್ನು ವಿಕೇಂದ್ರಿತವಾಗಿ ಸಂಸ್ಕರಣೆ ಮಾಡುವ ಉದ್ದೇಶದಿಂದ ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಲು ಸಾರ್ವಜನಿಕರಲ್ಲಿ ಹೋಂ ಕಾಂಪೋಸ್ಟಿಂಗ್, ಸಮುದಾಯ ಕಾಂಪೋಸ್ಟಿಂಗ್ನ್ನು ಅಳವಡಿಸಿಕೊಳ್ಳುವಂತೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
8 ರಿಂದ 10 ಟನ್ ಹಸಿ ತ್ಯಾಜ್ಯವನ್ನು ಕಂಪೋಸ್ಟ್ ಪಿಟ್ಸ್ಗಳಲ್ಲಿ ಕೊಳೆಸಿ ಗೊಬ್ಬರವಾಗಿ ಪರಿವರ್ತಿಸಲು ಕ್ರಮವಹಿಸಲಾಗುತ್ತಿದೆ. 10 ರಿಂದ 13 ಟನ್ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಪೇಲ್ ಮಾಡಿ ಹತ್ತಿರದ ಪುನರ್ಬಳಕೆದಾರರಿಗೆ ನೀಡಲು ಕ್ರಮವಹಿಸಲಾಗಿದೆ.
ಪೌರಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಣೆ ಮಾಡುವ ಕುರಿತಾಗಿ ತರಬೇತಿ ನೀಡಲಾಗಿದೆ. ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು 2016, ರೀತ್ಯಾ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇವಾರಿ ಮಾಡಲು ಎಲ್ಲಾ ಅಗತ್ಯ ಕ್ರಮವಹಿಸಲಾಗುತ್ತಿದೆ.
ಮಡಿಕೇರಿ ನಗರಸಭೆಗೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿವಿಧ ಯೋಜನೆಗಳ ಮೂಲಕ ಕಳೆದ ಮೂರು ವರ್ಷಗಳಿಂದ ಬಂದಿರುವ ಅನುದಾನವೆಷ್ಟು? ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಶಾಶ್ವತ ಯೋಜನೆ ಇದುವರೆಗೂ ಅನುಷ್ಠಾನಗೊಳ್ಳದಿರಲು ಕಾರಣಗಳೇನು ಎಂದು ವೀಣಾ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಡಾ. ನಾರಾಯಣಗೌಡ ಅವರು, ಮಡಿಕೇರಿ ನಗರಸಭೆಗೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವಿವಿಧ ಯೋಜನೆಗಳ ಮೂಲಕ ಕಳೆದ ಮೂರು ವರ್ಷಗಳಿಂದ ಬಂದಿರುವ ಅನುದಾನದ ವಿವರ.
2020-21ನೇ ಸಾಲಿನಲ್ಲಿ ಐಇಸಿ ಚಟುವಟಿಕೆಗಾಗಿ ರೂ. 10 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 15ನೇ ಜನರಲ್ ಬೇಸಿಕ್ ಗ್ರ್ಯಾಂಟ್ ಅಡಿ ರೂ. 50.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ 14ನೇ ಜನರಲ್ ಬೇಸಿಕ್ ಗ್ರಾಂಟ್ ಅಡಿ ರೂ. 41.80 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2018-19ನೇ ಸಾಲಿನಲ್ಲಿ 15ನೇ ಜನರಲ್ ಬೇಸಿಕ್ ಗ್ರಾಂಟ್ ಅಡಿ ರೂ. 31.40 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಎಸ್ಬಿಎಂ. ಯೋಜನೆಯಡಿ ರೂ. 98.05 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
2017 ಸಾಲಿನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ತ್ಯಾಜ್ಯ ಸಂಗ್ರಹಣೆ ಅಗತ್ಯವಿರುವ ವಾಹನಗಳ ಹಾಗೂ ತ್ಯಾಜ್ಯ ಸಂಸ್ಕರಣೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ರೂ.561.11 ಲಕ್ಷಗಳ ಬಂಡವಾಳ ಮೊತ್ತದ ವಿಸ್ತøತ ಯೋಜನಾ ವರದಿ ಸಿದ್ಧಪಡಿಸಿದ್ದು, ಸರ್ಕಾರವು ಅನುಮೋದನೆ ನೀಡಿದೆ. ರೂ. 98.05 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ.
ತ್ಯಾಜ್ಯ ಸಂಸ್ಕರಣೆ ಜಾಗದಲ್ಲಿ ಹಳೆಯ ತ್ಯಾಜ್ಯದ ರಾಶಿಯಿರುವುದರಿಂದ ಸಿವಿಲ್ ಕಾಮಗಾರಿಗಳನ್ನು ಸದರಿ ಸ್ಥಳದಲ್ಲಿ ಕೈಗೊಳ್ಳಲು ಕಷ್ಟಸಾಧ್ಯವಾಗಿರುತ್ತದೆ. ಆದುದರಿಂದ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಎಕ್ಸ್ಪ್ರೆಷನ್ ಆಫ್ ಇಂಟರೆಷ್ಟ್ ಅನ್ನು ದಿನಾಂಕ-27-11-2020 ರಂದು ಆಹ್ವಾನಿಸಲಾಗಿದೆ.
ಘನತ್ಯಾಜ್ಯ ವಿಲೇವಾರಿ ಕುರಿತು ಮಾನ್ಯ ಉಚ್ಚ ನ್ಯಾಯಲಯ, ಬೆಂಗಳೂರಿನಲ್ಲಿ ರಿಟ್ ಅರ್ಜಿ ಸಂಖ್ಯೆ -48/2020 ಎಸ್.ಆರ್.ವಿ.ಕೆ. ವೆಲ್ಫೇರ್ ಅಸೋಸಿಯೇಷನ್, ಕೊಡಗು/ ಕರ್ನಾಟಕ ಸರ್ಕಾರ ಮತ್ತು ಇತರರ ವಿರುದ್ದ ಪ್ರಕರಣ ದಾಖಲಾಗಿದ್ದು, ಪ್ರಕರಣವು ವಿಚಾರಣೆ ಹಂತದಲ್ಲಿರುತ್ತದೆ.
ಮಡಿಕೇರಿ ನಗರಸಭೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ತಾಂತ್ರಿಕ ಸಲಹೆ, ಅಭಿಪ್ರಾಯ ನೀಡಲು ಪೌರಾಡಳಿತ ನಿರ್ದೇಶನಾಲಯದಿಂದ ಒ/S SಂಂಊಂS ಏಜೆನ್ಸಿಯನ್ನು ನಿಯೋಜಿಸಿದೆ. ಈ ಏಜೆನ್ಸಿ ನೀಡಿರುವ ವರದಿಯ ರೀತ್ಯಾ ಮಡಿಕೇರಿ ನಗರವು ಇಛಿoಟogiಛಿಚಿಟಟಥಿ seಟಿsiಣive zoಟಿe ವಲಯದಲ್ಲಿದ್ದು, ಪ್ರಸ್ತುತ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಸ್ಯಾನಿಟರಿ ನೆಲಭರ್ತಿ ಜಾಗವು ಎತ್ತರದ ಪ್ರದೇಶದಲ್ಲಿದೆ. ಘನತ್ಯಾಜ್ಯ ನಿರ್ವಹಣೆ ನಿಯಮಗಳು 2016 ರೀತ್ಯಾ ಸೂಕ್ತದಲ್ಲಿರುವುದರಿಂದ ಪರ್ಯಾಯ ಜಾಗ ಗುರುತಿಸಿ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ತಿಳಿಸಲಾಗಿದೆ.
ನಗರದಲ್ಲಿ ಸೂಕ್ತ ಪ್ರದೇಶವನ್ನು ಗುರುತಿಸಿ, ಪ್ರಸ್ತಾವನೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ನಗರಸಭೆಗೆ ಸೂಚನೆ ನೀಡಲಾಗಿದೆ. ನಗರ ಸಭೆಯು ಬದಲಿ ಸ್ಥಳವನ್ನು ಗುರುತಿಸಿ, ಈ ಸ್ಥಳಕ್ಕೆ ಅನುಗುಣವಾಗಿ ಪರಿಷೃತ ವಿಸ್ತøತ ಯೋಜನಾ ವರದಿಯನ್ನು ಸಿದ್ಧಪಡಿಸಿ ಘನತ್ಯಾಜ್ಯ ವಿಲೇವಾರಿ ಘಟಕ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಡಾ. ನಾರಾಯಣಗೌಡ ಅವರು ತಿಳಿಸಿದರು.