ಕಡಂಗ, ಡಿ. 8: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್, ಯು.ಎ.ಇ. ಸಮಿತಿ ವತಿಯಿಂದ ದುಬೈಯಲ್ಲಿರುವ ಮುಶ್ರಿಫ್ ಉದ್ಯಾನವನದಲ್ಲಿ ಯು.ಎ.ಇ.ಯ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಯಿತು. ಯು.ಎ.ಇ. ರಾಷ್ಟ್ರಗೀತೆಯಿಂದ ಪ್ರಾರಂಭವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್, ಯು.ಎ.ಇ.ಯ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ, ಹಾಗೂ ಸಲಹಾ ಸಮಿತಿಯ ಸದಸ್ಯ ಉಸ್ಮಾನ್ ಹಾಜಿ ನಾಪೆÇೀಕ್ಲು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್, ಯು.ಎ.ಇ.ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡ್, ಕೋಶಾಧಿಕಾರಿ ಅಹಮದ್ ಚಾಮಿಯಾಲ್, ಸಹ ಕಾರ್ಯದರ್ಶಿ ನಜೀಬ್ ಕಡಂಗ, ಕನ್ವಿನಿಯರ್ ರಿಯಾಜ್ ಕೊಂಡಂಗೇರಿ, ಸಂಘಟನೆಯ ಕ್ಯಾಬಿನೆಟ್ ಸದಸ್ಯರಾದ ಹಾರಿಸ್ ಕುಂಜಿಲ, ಇಬ್ರಾಹಿಂ, ಝಕರಿಯ ಮತ್ತಿತರರು ಗುಂಡಿಯರೆ ಉಪಸ್ಥಿತರಿದ್ದರು.