ಮಡಿಕೇರಿ, ಡಿ. 8: ಕೇಂದ್ರ ಸರಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಅಖಿಲ ಭಾರತ ಕಿಸಾನ್ ಘಟಕ ಕರೆ ನೀಡಿದ್ದ ಭಾರತ್ ಬಂದ್ಗೆ ಕೊಡಗಿನಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ಮಡಿಕೇರಿ, ಕುಶಾಲನಗರ, ವೀರಾಜಪೇಟೆ ಪಟ್ಟಣಗಳಲ್ಲಿ ರೈತಪರ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದಿದ್ದು, ಗೋಣಿಕೊಪ್ಪ ನಗರ ವ್ಯಾಪ್ತಿ ಬಹುತೇಕ ಬಂದ್ ಆಗಿತ್ತು. ಉಳಿದೆಡೆಗಳಲ್ಲಿ ಜನ ಜೀವನ ಎಂದಿ ನಂತಿತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸಂಘದ ಕೊಡಗು ಘಟಕದಿಂದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಇಂದಿರಾಗಾಂಧಿ ವೃತ್ತದಲ್ಲಿ ರೈತಪರ ವಾಗಿ ಪ್ರತಿಭಟನೆ ಮಾಡಲಾಯಿತು. ರೈತ ಸಂಘ ಆಕ್ರೋಶ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾನವ ಸರಪಳಿ ರಚಿಸಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರೂಪ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿಮಾಡುವ ಮೂಲಕ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ಕಾಯ್ದೆ ಬದಲಾವಣೆಯ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಕೊಡಗಿನ ಕಾಫಿ, ಕರಿಮೆಣಸು ಬೇರೆಡೆಗೆ ರಫ್ತಾಗುತ್ತಿದೆ. ಆದರೂ, ದರ ಪಾತಾಳಕ್ಕಿಳಿದಿದೆ. ಭ್ರಷ್ಟಾಚಾರ ಎಲ್ಲ ಕಡೆಗಳಲ್ಲಿ ನಡೆಯುತ್ತಿದೆ.
ದಲ್ಲಾಳಿಗಳನ್ನು ನಿಯಂತ್ರಣ ಮಾಡಲು ಯೋಜನೆ ರೂಪಿಸುವ ಬದಲು ರೈತ ವಿರೋಧಿ ಕಾಯ್ದೆಯನ್ನು ತರುವುದು ಸರಿಯಲ್ಲ. ಕರಿಮೆಣಸಿಗೆ ರೂ 500 ಕನಿಷ್ಟ ರಫ್ತು ದರ ನಿಗದಿ ಯಾಗಿದ್ದರೂ ಕೂಡ ಅದು ಕೈ ಸೇರುತ್ತಿಲ್ಲ. ವಿಯೆಟ್ನಾಂ ಕರಿಮೆಣಸು ಕೊಡಗು ಮೆಣಸಿನೊಂದಿಗೆ ಮಿಶ್ರಿತ ವಾಗಿ ಮಾರಾಟ ಮಾಡ ಲಾಗುತ್ತಿದೆ. ರೈತ ಮುಖಂಡರನ್ನು ಕರೆಸಿ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. ದಲ್ಲಾಳಿ ಹಾವಳಿ ನಿಯಂತ್ರಣ ಕಡಿ ವಾಣವೇರಲು ಸರ್ಕಾರ ಯೋಜನೆ ರೂಪಿಸಬೇಕು. ರೈತರ ಆತ್ಮಹತ್ಯೆ ಪ್ರಕರಣ ದೇಶದಲ್ಲಿ ನಡೆಯು ತ್ತಿದೆ. ಕಾಯ್ದೆಗಳು ಪ್ರಾಯೋಗಿಕವಾಗಿ ಸರಿಯಾಗಿರಬೇಕು.
ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಪ್ರತಿಭಟನೆ ವೇಳೆ ಮಾತಿನ ಚಕಮಕಿ ನಡೆಯಿತು. ರಸ್ತೆ ತಡೆ ಮಾಡುವ ವೇಳೆ ಪೆÇಲೀಸರು ತಡೆ ಮಾಡದಂತೆ ಹೇಳಿದಾಗ ರೈತ ಸಂಘದವರು ಪೆÇಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಡಿ.ಎಸ್.ಪಿ. ಪೊಲೀಸ್ ನಿರೀಕ್ಷಕ ಮೇದಪ್ಪ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
ಜನರಿಗೆ ತೊಂದರೆ ಕೊಡದಂತೆ ಅಧಿಕಾರಿಗಳು ತಡೆದರು. ನಾವು ಜನರಿಗೆ ತೊಂದರೆ ಮಾಡುವುದಿಲ್ಲ, ರೈತರ ಹೋರಾಟ ಹತ್ತಿಕ್ಕಬೇಡಿ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು. ಬಳಿಕ ಡಿವೈಎಸ್ಪಿ ಬಾರಿಕೆ ದಿನೇಶ್ ಮಧÀ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.(ಮೊದಲ ಪುಟದಿಂದ) ಡಾ.ಸ್ವಾಮಿನಾಥನ್ ವರದಿಯಲ್ಲಿ ಬೆಳೆಗಳು ಬೆಳೆಯುವ ಖರ್ಚಿನ ವರದಿ ಇದೆ. ಇದರ ಆಧಾರದಲ್ಲಿ ಎಂಎಸ್ ಪಿ ನಿಗದಿ ಮಾಡಬೇಕು. ಇದರಿಂದ ರೈತನಿಗೆ ಸೂಕ್ತ ಬೆಂಬಲ ಬೆಲೆ ದೊರಕಲಿದೆ.
ಕೇಂದ್ರ ಸರ್ಕಾರ ರೈತಪರ ನಿಲುವು ತೋರಬೇಕು. ಬೆಳೆಗೆ ದರ ನಿಗದಿ ಮಾಡುವವರು ಯಾರು, ಹೇಗೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಮಾತನಾಡಿ, ಇದು ರೈತ ವಿರೋಧಿ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ಜಿಡಿಪಿ ಏರಿಕೆಗೆ ರೈತರು ಕಾರಣರಾಗಿದ್ದಾರೆ. ದೇಶದ ಆದಾಯ ಮೂಲವಾಗಿರುವ ಕೃಷಿಗೆ ಸೂಕ್ತ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಬಗ್ಗೆ ನಿರಂತರ ಹೋರಾಟ ರೂಪಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕಾಫಿ, ಕರಿಮೆಣಸು ಬೆಲೆ ಕುಸಿದಿದೆ ಈ ಬಗ್ಗೆ ಸರ್ಕಾರ ಕ್ರಮವಹಿಸದೆ ರೈತರನ್ನು ಮತ್ತಷ್ಟು ಶೋಷಿಸುತ್ತಿದೆ ಎಂದರು. ರೈತ ಮುಖಂಡ ಪುಚ್ಚಿಮಾಡ ಅಶೋಕ್ ಮಾತನಾಡಿ, ರೈತರ ಬಗ್ಗೆ ಅನುಕಂಪ ಇರಲಿ. ರೈತರು ಕೂಡ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.
ದಸಂಸ ಸಂಚಾಲಕ ಪರಶುರಾಮ್ ಮಾತನಾಡಿ, ಕಾರ್ಮಿಕರು, ದಲಿತರು, ರೈತರ ಮೇಲೆ ನಿರಂತರ ಶೋಷಣೆಯಾಗುತ್ತಿದೆ. ಸಿರಿವಂತರ ಪರ ಸರ್ಕಾರ ಕೆಲಸ ಮಾಡುತ್ತಾ ನಂಬಿಕೆ ಕಳೆದುಕೊಂಡಿದೆ. ರೈತ ವಿರೋಧಿ ನಡೆ ಬಿಡದಿದ್ದರೆ. ಹೋರಾಟ ಉಗ್ರರೂಪ ತಾಳಲಿದೆ ಎಂದರು.
ಜಮಾತ್ ಇಸ್ಲಾಂ ಹಿಂದ್ ಅಧ್ಯಕ್ಷ ಹನೀಫ್ ಮಾತನಾಡಿ, ಕಾಯ್ದೆ ಕಾಪೆರ್Çೀರೆಟ್ ಕಂಪನಿಗಳ ಪರ ಇದೆ. ರೈತರ ಬೆನ್ನೆಲುಬು ಮುರಿಯುವ ಕೆಲಸವಾಗಿದೆ. ಬೆಳೆ ದಲ್ಲಾಳಿಗಳ ಕೈಯಲ್ಲಿ ಸಿಲುಕಿದೆ.
ಈ ನಡುವೆ ಕಾಪೆರ್Çೀರೇಟ್ ಕಂಪನಿಗಳಿಗೆ ನೀಡಿ ಮತ್ತಷ್ಟು ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ. ರೈತ ವಿರೋಧಿ ಅಂಶ ಕೈಬಿಡಬೇಕು. ಮಧ್ಯವರ್ತಿಗಳಿಂದ ದೂರ ಮಾಡಿ ನೇರ ಮಾರುಕಟ್ಟೆ ಸೃಷ್ಟಿಸಿ ಉತ್ತಮ ಬೆಲೆ ದೊರಕಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಸಂಚಾಲಕ ಪುಚ್ಚಿಮಾಡ ಸುಭಾಷ್, ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಂಬ ಕಾರ್ಯಪ್ಪ, ಮುಖಂಡರಾದ ಪುಚ್ಚಿಮಾಡ ಅಶೋಕ್, ಮಹೇಶ್, ಟಿ.ರಾಜ ಮತ್ತಿತರರು ಇದ್ದರು.
ಎಸ್.ಡಿ.ಪಿ.ಐ. ಆಕ್ರೋಶ
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಇಂದಿರಾಗಾಂಧಿ ವೃತ್ತದಲ್ಲಿ ರೈತರ ಪರವಾಗಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಜಿಲ್ಲಾಧ್ಯಕ್ಷ ಮನ್ಸೂರ್ ಇವರುಗಳು ಮಾತನಾಡಿ, ಕೇಂದ್ರ ಸರಕಾರವು ರೈತರ ಹೋರಾಟಕ್ಕೆ ಮನ್ನಣೆ ನೀಡುವ ಮೂಲಕ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಮಾಜಿ ಅಧ್ಯಕ್ಷ ಅಮೀನ್ ಮೊಯ್ಸಿನ್, ಪಿಎಫ್ಐ ಪ್ರಮುಖರಾದ ತುಫೈಲ್, ಶೌಕತ್ ಆಲಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗೋಣಿಕೊಪ್ಪ ಬಹುತೇಕ ಬಂದ್
ರೈತ ಸಂಘ ಕರೆ ನೀಡಿದ್ದ ಬಂದ್ ಗೋಣಿಕೊಪ್ಪಲುವಿನಲ್ಲಿ ಬಹುತೇಕ ಯಶಸ್ವಿಯಾಯಿತು. ನಗರದ ಕೆಲವೇ ಕೆಲವು ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತವಾಯಿತು. ಕೆಲವು ಖಾಸಗಿ ಬಸ್ಗಳು ಓಡಾಟ ನಡೆಸಿದವಾದರೂ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿತ್ತು. ಬೆರಳೆಣಿಕೆಯ ಆಟೋ ರಿಕ್ಷಾಗಳು ರಸ್ತೆಗೆ ಇಳಿದಿದ್ದವು. ಜನಸಂಚಾರ ವಿರಳವಾಗಿತ್ತು. ಆಯಾಕಟ್ಟಿನ ಸ್ಥಳಗಳಲ್ಲಿ ಪೆÇಲೀಸರನ್ನು ನಿಯೋಜಿಸಲಾಗಿತ್ತು. ಮಾರುಕಟ್ಟೆ ಸಂಪೂರ್ಣ ಮುಚ್ಚಿತ್ತು. ಪೆಟ್ರೋಲ್ ಬಂಕ್ಗಳು, ವೈನ್ ಶಾಪ್, ರೆಸ್ಟೋರೆಂಟ್, ಬಾರ್ಗಳು ತೆರೆದಿದ್ದವು. ಕೆಲವು ಕೆ.ಎಸ್.ಆರ್.ಟಿ.ಸಿ. ಬಸ್ಗಳು ಸಂಚಾರ ನಡೆಸಿದವು.
ವೀರಾಜಪೇಟೆಯಲ್ಲಿ ಪ್ರತಿಭಟನೆ
ಕೇಂದ್ರ ಸರಕಾರದ ಕೃಷಿ ನೀತಿಯನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವೀರಾಜಪೇಟೆ ಪಟ್ಟಣದಲ್ಲಿ ವಿಫಲವಾಯಿತು. ಎಲ್ಲಾ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಭಾರತ್ ಬಂದ್ನ್ನು ಬೆಂಬಲಿಸಿ ಕಾಂಗ್ರೆಸ್, ಜೆಡಿಎಸ್, ಸಿ.ಪಿ.ಐ.ಎಂ. ಸೇರಿದಂತೆ ವಿವಿಧ ಪಕ್ಷಗಳ ಪದಾಧಿಕಾರಿಗಳು ಐಕ್ಯ ವೇದಿಕೆಯಡಿಯಲ್ಲಿ ಒಮ್ಮತವಾಗಿ ಸೇರಿ ಇಲ್ಲಿನ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯೋಗಾನಂದ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ಕೇಂದ್ರ ಸರಕಾರ ಬಂಡವಾಳ ಶಾಹಿಗಳ ಪರ ಇದ್ದು ಅರ್ಹ ರೈತ ಫಲಾನುಭವಿಗಳಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಬೀದಿಗೆ ತಳ್ಳುತ್ತಿದೆ. ಕೇಂದ್ರ ಸರಕಾರ ಕೂಡಲೇ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಮಾತನಾಡಿ, ಕೇಂದ್ರ ಸರಕಾರ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಹಕ್ಕುಗಳನ್ನು ಕಿತ್ತುಕೊಂಡಿದೆ. ಇದು ರೈತ ವಿರೋಧಿ ನೀತಿಯಾಗಿದ್ದು ಕೂಡಲೇ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೆ.ಡಿ.ಎಸ್. ತಾಲೂಕು ಸಮಿತಿ ಉಪಾಧ್ಯಕ್ಷ ಪಂದಿಯಂಡ ರವಿ ಮಾದಪ್ಪ, ಕಾರ್ಯದರ್ಶಿ ಬಾಳೇಕುಟ್ಟೀರ ದಿನಿ ಸಂಚಾಲಕ ದುಷ್ಯಂತ ರೈ, ಸಂಘಟನಾ ಕಾರ್ಯದರ್ಶಿ ಅಪ್ಪಂಡೇರಂಡ ಸನ್ನು, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ, ಮೋಹನ್, ಸೋಷಿಯಲ್ ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾದ ಕೆ.ಟಿ. ಬಷೀರ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಜನಿಕಾಂತ್, ಮಹಮದ್ ರಾಫಿ, ಮಾಜಿ ಅಧ್ಯಕ್ಷ ವಿ.ಕೆ. ಸತೀಶ್, ಕಮ್ಯೂನಿಸ್ಟ್ ಪಕ್ಷದ ಕೆ.ವಿ. ಸುನೀಲ್ ಮತ್ತಿತರರು ಭಾಗವಹಿಸಿದ್ದರು.
ನಾಪೋಕ್ಲು, ಕರಿಕೆ, ಶ್ರೀಮಂಗಲ, ಕುಟ್ಟ, ಕೂಡಿಗೆ, ಸುಂಟಿಕೊಪ್ಪ, ಶನಿವಾರಸಂತೆ, ಭಾಗಮಂಡಲ, ಸಿದ್ದಾಪುರ, ಕೊಡ್ಲಿಪೇಟೆ, ತಿತಿಮತಿ ವ್ಯಾಪ್ತಿಯಲ್ಲಿ ಯಾವುದೇ ಬಂದ್ ನಡೆಯಲಿಲ್ಲ. ಪೊನ್ನಂಪೇಟೆಯಲ್ಲಿ ಹಲವಷ್ಟು ಅಂಗಡಿಗಳು ಬಂದ್ ಆಗಿದ್ದವು.
ಕುಶಾಲನಗರದಲ್ಲಿ ಬಂದ್ ಇಲ್ಲ
ಬಂದ್ಗೆ ಕುಶಾಲನಗರದಲ್ಲಿ ಯಾವುದೇ ಸ್ಪಂದನೆ ದೊರಕದೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.
ಬಂದ್ ಕರೆ ಹಿನೆÀ್ನಲೆಯಲ್ಲಿ ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕೆಲವು ರೈತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರದ ಕೃಷಿ ತಿದ್ದುಪಡಿ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಇಂಟೆಕ್ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ರೈತ ಮಸೂದೆ ಬಗ್ಗೆ ಇನ್ನೂ ರೈತರಿಗೆ ಸರಿಯಾದ ಮಾಹಿತಿ ನೀಡದೆ ಮಸೂದೆಯನ್ನು ಅಂಗೀಕರಿಸಿರುವುದು ಸರಿಯಲ್ಲ ಎಂದರಲ್ಲದೆ, ರೈತರ ಚಳುವಳಿ ದಮನ ಮಾಡಲು ಪ್ರಯತ್ನಿಸುವ ಸರಕಾರದ ನಿಲುವಿಗೆ ಪ್ರತಿಯೊಬ್ಬರೂ ವಿರೋಧಿಸಬೇಕೆಂದರು.
ಸಿಐಟಿಯು ಪ್ರಮುಖ ಭರತ್, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ರೈತರ ವಿರುದ್ಧ ನಡೆದುಕೊಳ್ಳುತ್ತಿದೆ. ಸಂವಿಧಾನ ನೀತಿ ನಿಯಮಗಳನ್ನು ಗಾಳಿಗೆ ತೂರಿ ರೈತ ಮಸೂದೆಗಳನ್ನು ತಿದ್ದುಪಡಿಗೊಳಿಸಿ ಬಂಡವಾಳಶಾಹಿಗಳ ಪರವಹಿಸಿ ಕೇಂದ್ರ ಸರಕಾರ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐಎಂಎಲ್, ಐಎನ್ಟಿಯುಸಿ, ದಲಿತ ಸಂಘರ್ಷ ಸಮಿತಿ, ಎಐಟಿಯುಸಿ, ರಾಜ್ಯ ರೈತ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಪ್ರಮುಖರಾದ ಗೋವಿಂದರಾಜ್ದಾಸ್, ಕೆ.ಆರ್.ಜಗದೀಶ್, ಕೆ.ಬಿ.ರಾಜು, ಸೋಮಪ್ಪ, ರೈತ ಸಂಘದ ಪ್ರಮುಖ ನಿರ್ವಾಣಪ್ಪ ಮತ್ತಿತರರು ಇದ್ದರು.
ಸೋಮವಾರಪೇಟೆಯಲ್ಲಿ ಸಹಜ ಸ್ಥಿತಿ
ಭಾರತ್ ಬಂದ್ಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬೆಂಬಲ ದೊರೆಯದೆ ಪಟ್ಟಣ ಸಹಜ ಸ್ಥಿತಿಯಲ್ಲಿತ್ತು.
ರೈತಪರ ಸಂಘಟನೆಗಳು ಭಾರತ್ ಬಂದ್ಗೆ ನೈತಿಕ ಬೆಂಬಲ ನೀಡಿದ್ದನ್ನು ಹೊರತುಪಡಿಸಿ ಬೀದಿಗಿಳಿದು ಹೋರಾಟ ನಡೆಸಲು ಮನಸ್ಸು ಮಾಡದ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಇತರ ಭಾಗದಲ್ಲಿ ಯಾವದೇ ಬಂದ್ ಹಾಗೂ ಪ್ರತಿಭಟನೆ ನಡೆಯಲಿಲ್ಲ.
ಪರಿಣಾಮ ಪಟ್ಟಣದಲ್ಲಿ ಜನಜೀವನ ಎಂದಿನಂತೆ ನಡೆಯಿತು. ಸರ್ಕಾರಿ ಬಸ್ ಸೇರಿದಂತೆ ಖಾಸಗಿ ಬಸ್ಗಳು, ಖಾಸಗಿ ವಾಹನಗಳು, ಆಟೋಗಳ ಓಡಾಟ ಎಂದಿನಂತಿತ್ತು.
ಭಾರತ್ ಬಂದ್ ಕರೆಗೆ ವರ್ತಕ ಸಮುದಾಯದಿಂದಲೂ ಯಾವದೇ ಬೆಂಬಲ ಇಲ್ಲದ್ದರಿಂದ ವ್ಯಾಪಾರ ವಹಿವಾಟು ಸುಗಮವಾಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಎಲ್ಲೆಡೆ ಅಭ್ಯರ್ಥಿಗಳ ಓಡಾಟ, ರಾಜಕೀಯ ಚಟುವಟಿಕೆ ಕಂಡುಬಂತು. ದಾಖಲಾತಿಗಳ ಹೊಂದಾಣಿಕೆಗಾಗಿ ತಾಲೂಕು ಕಚೇರಿಯಲ್ಲಿ ಹೆಚ್ಚಿನ ಜನ ಸಂದಣಿ ಕಂಡುಬಂತು. ಈ ಭಾಗದ ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆ, ಧರಣಿ, ಮನವಿ ಸಲ್ಲಿಕೆಯಿಂದಲೂ ದೂರ ಉಳಿದಿದ್ದರು.
ಕುಶಾಲನಗರ : ರೈತ ವಿರೋಧಿ ಕೃಷಿ ಕಾಯ್ದೆಯನ್ನು ರದ್ದುಪಡಿಸಲು ಆಗ್ರಹಿಸಿ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ರೈತ ಕ್ರಾಂತಿ ಆಂದೋಲನ ಬೆಂಬಲಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭ ಕುಶಾಲನಗರ ಪ.ಪಂ. ಸದಸ್ಯ ಪ್ರಮೋದ್ಮುತ್ತಪ್ಪ, ಶೇಖ್ ಖಲೀಮುಲ್ಲಾ, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಅಬ್ದುಲ್ ಖಾದರ್, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪ್ರಮುಖರಾದ ಶಿವಶಂಕರ್, ಕಿರಣ್ ಮತ್ತಿತರರು ಇದ್ದರು.