ಶನಿವಾರಸಂತೆ, ಡಿ. 8: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೌನಾಚರಣೆ ಆಚರಿಸಲಾಯಿತು. ಮುಖಂಡರಾದ ಜನಾರ್ದನ್, ಸೋಮಣ್ಣ, ವಿಜಯ್, ವಸಂತ್, ವೀರಭದ್ರ, ಕಾಳಯ್ಯ, ಪ್ರಸನ್ನ, ಇಂದ್ರೇಶ್, ನವೀನ್, ಪೃಥ್ವಿ, ನಾಗೇಶ್, ಹೇಮಂತ್ ಇತರರು ಹಾಜರಿದ್ದರು.
ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದಲ್ಲಿ ಗ್ರಾಮಸ್ಥರು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನದ ಪ್ರಯುಕ್ತ ರಾತ್ರಿ ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮಾಡಿ ಸ್ಮರಿಸಿ ಅವರಿಗೆ ಗೌರವ ಸಮರ್ಪಿಸಿದರು.