ಸಾಧಕನಿಗೆ ನೆರವಾದ ಸ್ನೇಹಿತರು ಕಣಿವೆ, ಡಿ. 8: ಬೆಂಗಳೂರಿನ ದೇವನಹಳ್ಳಿಯ ಟ್ರೈಬಲ್ಸ್ ಸಾಹಸ ಅಕಾಡೆಮಿ ವತಿಯಿಂದ ಇದೇ ತಾ. 6 ರಂದು ನಡೆದ ಎರಡನೇ ಸುತ್ತಿನ ಎಂಆರ್ಎಫ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಕುಶಾಲನಗರದ ನೆಹರೂ ಬಡಾವಣೆ ನಿವಾಸಿ ಸ್ಟೀಫನ್ ರಾಯ್ ಮೊದಲ ಸ್ಥಾನ ಗಳಿಸಿದ್ದಾನೆ.ಕುಶಾಲನಗರದ ಚೆಸ್ಕಾಂ ಇಲಾಖೆಯಲ್ಲಿ ನೌಕರರಾಗಿದ್ದ ದಿ. ಅಂಥೋಣಿ ಸ್ವಾಮಿ ಹಾಗೂ ದಿ. ರೋಸ್ ಮೇರಿಯವರ ಮಗನಾಗಿರುವ ಈ ಸ್ಟೀಫನ್ ಪೆÇೀಷಕರನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡ ನೋವಿದ್ದರೂ ಕೂಡ, ಆ ನೋವಿನಲ್ಲೂ ಏನಾದರೊಂದು ಸಾಧಿಸಲೇಬೇಕೆಂದು ಪಟ್ಟ ಶ್ರಮ ಸಾರ್ಥಕವಾಗಿದೆ.ಬೆಂಗಳೂರಿನ ದೇವನಹಳ್ಳಿಯಿಂದ ದೊಡ್ಡಬಳ್ಳಾಪುರದವರೆಗೆ ಡಿ. 6 ರಂದು ನಡೆದ 167 ಕಿಮೀ ದೂರ ತೀರದ ರ್ಯಾಲಿಯಲ್ಲಿ ದೇಶದ ಅನೇಕ ರಾಜ್ಯಗಳಿಂದ ಒಟ್ಟು 70 ಸ್ಪರ್ಧಿಗಳು ಭಾಗವಹಿಸಿದ್ದರು. ಅಪ್ಪ ಹಾಗೂ ಅಮ್ಮನನ್ನು ಕಳೆದುಕೊಂಡ ನಾನು ಪದವಿಯನ್ನು ಪೂರ್ಣಗೊಳಿಸಿದ್ದೇನೆ. ಹವ್ಯಾಸವಾಗಿ ಬೈಕ್ ರ್ಯಾಲಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮೈಸೂರಿನ ಬೈಕ್ ಮೆಕ್ಯಾನಿಕ್ ಆರ್.ಎಸ್. ರೋಹಿತ್, ಪಿರಿಯಾಪಟ್ಟಣದ ಹುಣಸೇವಾಡಿಯ ಬ್ರಿಜೇಶ್ ಗೌಡ, ಸೋಮವಾರಪೇಟೆಯ ಆಕಾಶ್ ಗೌಡ, ಕುಶಾಲನಗರದ ಸಂಜಯ್ ಎಂಬ ಸ್ನೇಹಿತರು ನನಗೆ ಮರೆಯಲಾರದ ಸಹಾಯ ಹಾಗೂ ಸಹಕಾರವನ್ನು ನೀಡುತ್ತಿದ್ದಾರೆ.
ನಾನು ಸಾಹಸಗೈದು ಪಡೆದ ಟ್ರೋಫಿಯನ್ನು ನನಗೆ ಸಹಾಯ ಮಾಡಿದವರಿಗೆ ಅರ್ಪಿಸುತ್ತೇನೆ. ಹಾಗೆಯೇ ಜೀವನಕ್ಕಾಗಿ ಮೃತಪಟ್ಟ ತಾಯಿಯ ಉದ್ಯೋಗವನ್ನು ಅನುಕಂಪದ ಆಧಾರದಲ್ಲಿ ಪಡೆಯಲು ಪ್ರಯತ್ನಿಸುತ್ತೇನೆ ಎಂದು ‘ಶಕ್ತಿ’ ಯೊಂದಿಗೆ ಹೇಳಿಕೊಂಡರು.