ಕೂಡಿಗೆ, ಡಿ. 8: ಹೆಬ್ಬಾಲೆಯ ದಿನಸಿ ಅಂಗಡಿ ಒಂದರಲ್ಲಿ ಪರವಾನಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ಪೆÇಲೀಸರು ಅಂಗಡಿಯಲ್ಲಿ ದಾಸ್ತಾನು ಇದ್ದ 9.36 ಲೀಟರ್ ಮದ್ಯವನ್ನು ವಶಪಡಿಸಿ ಕೊಂಡಿದ್ದಾರೆ. ಅಂಗಡಿ ಮಾಲೀಕ ರಘು ಎಂಬವರ ಮೇಲೆ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.