ದೇವಾಲಯಗಳ ಬಳಿ
ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ತಮ್ಮ ವಾಸದ ಮನೆಗಳಲ್ಲಿ ಇಟ್ಟುಕೊಂಡಿದ್ದ ದೇವರ ಚಿತ್ರಗಳಿರುವ ಫೋಟೋಗಳನ್ನು ತಂದು ಸಮೀಪದ ದೇವಾಲಯಗಳ ಬಳಿ ತಂದು ಇಡುವ ಕೆಲಸ ಮಾಡುತ್ತಿರುವುದು ಹಲವೆಡೆ ಕಾಣಸಿಗುವ ಸಾಮಾನ್ಯ ಸಂಗತಿಯಾಗಿದೆ. ಅಂದರೆ ಮನೆಗಳಲ್ಲಿಟ್ಟು ಪೂಜಿಸುವ ದೇವರ ಚಿತ್ರಪಟಗಳು ಕೆಳ ಬಿದ್ದು ಗಾಜು ಒಡೆದರೆ, ಅಥವಾ ಹಳೆಯ ಮನೆಯಿಂದ ಹೊಸ ಮನೆಗಳಿಗೆ ಸ್ಥಳಾಂತರಗೊಂಡಾಗ ಹಳೆಯ ದನ್ನು ಬಿಸಾಡುವುದು ಕೆಲವರಿಗೆ ಚಾಳಿಯಾಗಿ ಬಿಟ್ಟಿದೆ. ಅವರವರ ಮನೆಗಳಿಗೆ ಬೇಡವಾದ ಆ ವಸ್ತುವನ್ನು ತಂದು ಮೆಲ್ಲಗೆ ಯಾರಿಗೂ ಕಾಣದ ಹಾಗೆ ಕಾವೇರಿ ನದಿಗೆ ಬಿಸಾಡುವುದು. ಅಥವಾ ಸಮೀಪದ ದೇವಾಲಯಗಳ ಬಳಿ ತಂದು ಹಾಕುವುದು ಕೆಲವರಿಗೆ ರೂಢಿಯಾಗಿ ಬಿಟ್ಟಿದೆ. ಹಾಗಾಗಿ ಕುಶಾಲನಗರದ ಸೋಮೇಶ್ವರ ದೇವಾಲಯ, ಕಾವೇರಿ ನದಿ ದಂಡೆಯ ಉದ್ಭವ ಸುಬ್ರಮಣ್ಯ ದೇವಾಲಯ, ಕೂಡುಮಂಗಳೂರಿನ ದೊಡ್ಡಮ್ಮ ದೇವಾಲಯ, ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯ ಹೀಗೆ ಎಲ್ಲೆಂದರಲ್ಲಿ ಸಮೀಪವಿರುವ ದೇವಾಲಯಗಳ ಬಳಿ ಹಳೆಯ ಮತ್ತು ಹಾಳಾದ ಪೆÇೀಟೋಗಳನ್ನು ತಂದು ಬಿಸಾಡುವ ಪ್ರವೃತ್ತಿಯ ಬಗ್ಗೆ ಮಾಜಿ ಯೋಧ, ಸಮಾಜ ಸೇವಕರಾದ ಅಮೆ ಜನಾರ್ದನ್ ಬೇಸರ ವ್ಯಕ್ತಪಡಿಸಿದ್ದೇ ಅಲ್ಲದೆ ದೇವಾಲಯಗಳು ಹಿಂದೂಗಳ ಶ್ರದ್ಧಾ ಕೇಂದ್ರಗಳು. ಇಲ್ಲಿ ಶ್ರದ್ಧೆಯ ಪೂಜೆ ಪಾರ್ಥನೆ ಭಜನೆಗಳಿರಬೇಕು. ಸತ್ಸಂಗಗಳಿರಬೇಕೆ ಹೊರತು ಬೇಡವಾದ ವಸ್ತುಗಳಲ್ಲ ಎಂದಿದ್ದಾರೆ. ಸಾರ್ವಜನಿಕ ಭಕ್ತಾದಿಗಳು ಇನ್ನು ಮುಂದೆ ಯಾವುದೇ ಕಾರಣಕ್ಕೂ ದೇವರ ಮುಖ ಫೋಟೋಗಳನ್ನು ಯಾವುದೇ ದೇಗುಲಗಳ ಬಳಿ ತಂದು ಇಡಕೂಡದು ಮತ್ತು ಎಸೆಯ ಕೂಡದು ಎಂದು ಅವರು ವಿನಂತಿಸಿಕೊಂಡಿದ್ದಾರೆ. ಕೂಡುಮಂಗಳೂರು ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯದ ಬಳಿಯ ವೃಕ್ಷವೊಂದರ ಬುಡದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಭಾವಚಿತ್ರವನ್ನು ಯಾರೊ ಇಟ್ಟು ಹೋಗಿದ್ದಾರೆ. ಇನ್ನು ಗಣಪತಿ, ಲಕ್ಷ್ಮಿ, ಶಿವ ಪಾರ್ವತಿ ಹೀಗೆ ನಾನಾ ದೇವರ ಪೆÇೀಟೋಗಳನ್ನು ಮನಬಂದಂತೆ ಎಲ್ಲಾ ಕಡೆ ಬಿಸಾಡÀಲಾಗಿದೆ. ಇನ್ನಾದರೂ ಮನೆಗಳಿಗಿಂತಲೂ ದೇಗುಲ ಹಾಗೂ ವೃಕ್ಷಗಳ ಸನ್ನಿಧಿಗಳು ಶ್ರೇಷ್ಠವಾದವು ಎಂಬ ಸತ್ಯದ ಅರಿವಾಗ ಬೇಕಿದೆ. ಮನೆಗಳು ಆ ಮನೆಯ ಮಂದಿಗಷ್ಟೇ ನೆರಳಾಗುತ್ತವೆ. ಆದರೆ ಶ್ರದ್ಧಾ ಕೇಂದ್ರಗಳು ಹಾಗೂ ವೃಕ್ಷಗಳು ನೂರಾರು ಮಂದಿಗೆ ನೆರಳಾಗುತ್ತವೆ. ಅಲ್ಲದೇ ಶಾಂತಿ ನೆಮ್ಮದಿ ನೀಡುವ ತಾಣ ಗಳು ಎಂಬ ವಾಸ್ತವದ ಅರಿವಾಗಬೇಕಿದೆ ಎಂದಿದ್ದಾರೆ.
-ಕೆ. ಎಸ್. ಮೂರ್ತಿ, ಕುಶಾಲನಗರ. ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ತಮ್ಮ ವಾಸದ ಮನೆಗಳಲ್ಲಿ ಇಟ್ಟುಕೊಂಡಿದ್ದ ದೇವರ ಚಿತ್ರಗಳಿರುವ ಫೋಟೋಗಳನ್ನು ತಂದು ಸಮೀಪದ ದೇವಾಲಯಗಳ ಬಳಿ ತಂದು ಇಡುವ ಕೆಲಸ ಮಾಡುತ್ತಿರುವುದು ಹಲವೆಡೆ ಕಾಣಸಿಗುವ ಸಾಮಾನ್ಯ ಸಂಗತಿಯಾಗಿದೆ. ಅಂದರೆ ಮನೆಗಳಲ್ಲಿಟ್ಟು ಪೂಜಿಸುವ ದೇವರ ಚಿತ್ರಪಟಗಳು ಕೆಳ ಬಿದ್ದು ಗಾಜು ಒಡೆದರೆ, ಅಥವಾ ಹಳೆಯ ಮನೆಯಿಂದ ಹೊಸ ಮನೆಗಳಿಗೆ ಸ್ಥಳಾಂತರಗೊಂಡಾಗ ಹಳೆಯ ದನ್ನು ಬಿಸಾಡುವುದು ಕೆಲವರಿಗೆ ಚಾಳಿಯಾಗಿ ಬಿಟ್ಟಿದೆ. ಅವರವರ ಮನೆಗಳಿಗೆ ಬೇಡವಾದ ಆ ವಸ್ತುವನ್ನು ತಂದು ಮೆಲ್ಲಗೆ ಯಾರಿಗೂ ಕಾಣದ ಹಾಗೆ ಕಾವೇರಿ ನದಿಗೆ ಬಿಸಾಡುವುದು. ಅಥವಾ ಸಮೀಪದ ದೇವಾಲಯಗಳ ಬಳಿ ತಂದು ಹಾಕುವುದು ಕೆಲವರಿಗೆ ರೂಢಿಯಾಗಿ ಬಿಟ್ಟಿದೆ. ಹಾಗಾಗಿ ಕುಶಾಲನಗರದ ಸೋಮೇಶ್ವರ ದೇವಾಲಯ, ಕಾವೇರಿ ನದಿ ದಂಡೆಯ ಉದ್ಭವ ಸುಬ್ರಮಣ್ಯ ದೇವಾಲಯ, ಕೂಡುಮಂಗಳೂರಿನ ದೊಡ್ಡಮ್ಮ ದೇವಾಲಯ, ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯ ಹೀಗೆ ಎಲ್ಲೆಂದರಲ್ಲಿ ಸಮೀಪವಿರುವ ದೇವಾಲಯಗಳ ಬಳಿ ಹಳೆಯ ಮತ್ತು ಹಾಳಾದ ಪೆÇೀಟೋಗಳನ್ನು ತಂದು ಬಿಸಾಡುವ ಪ್ರವೃತ್ತಿಯ ಬಗ್ಗೆ ಮಾಜಿ ಯೋಧ, ಸಮಾಜ ಸೇವಕರಾದ ಅಮೆ ಜನಾರ್ದನ್ ಬೇಸರ ವ್ಯಕ್ತಪಡಿಸಿದ್ದೇ ಅಲ್ಲದೆ ದೇವಾಲಯಗಳು ಹಿಂದೂಗಳ ಶ್ರದ್ಧಾ ಕೇಂದ್ರಗಳು. ಇಲ್ಲಿ ಶ್ರದ್ಧೆಯ ಪೂಜೆ ಪಾರ್ಥನೆ ಭಜನೆಗಳಿರಬೇಕು. ಸತ್ಸಂಗಗಳಿರಬೇಕೆ ಹೊರತು ಬೇಡವಾದ ವಸ್ತುಗಳಲ್ಲ ಎಂದಿದ್ದಾರೆ. ಸಾರ್ವಜನಿಕ ಭಕ್ತಾದಿಗಳು ಇನ್ನು ಮುಂದೆ ಯಾವುದೇ ಕಾರಣಕ್ಕೂ ದೇವರ ಮುಖ ಫೋಟೋಗಳನ್ನು ಯಾವುದೇ ದೇಗುಲಗಳ ಬಳಿ ತಂದು ಇಡಕೂಡದು ಮತ್ತು ಎಸೆಯ ಕೂಡದು ಎಂದು ಅವರು ವಿನಂತಿಸಿಕೊಂಡಿದ್ದಾರೆ. ಕೂಡುಮಂಗಳೂರು ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯದ ಬಳಿಯ ವೃಕ್ಷವೊಂದರ ಬುಡದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಭಾವಚಿತ್ರವನ್ನು ಯಾರೊ ಇಟ್ಟು ಹೋಗಿದ್ದಾರೆ. ಇನ್ನು ಗಣಪತಿ, ಲಕ್ಷ್ಮಿ, ಶಿವ ಪಾರ್ವತಿ ಹೀಗೆ ನಾನಾ ದೇವರ ಪೆÇೀಟೋಗಳನ್ನು ಮನಬಂದಂತೆ ಎಲ್ಲಾ ಕಡೆ ಬಿಸಾಡÀಲಾಗಿದೆ. ಇನ್ನಾದರೂ ಮನೆಗಳಿಗಿಂತಲೂ ದೇಗುಲ ಹಾಗೂ ವೃಕ್ಷಗಳ ಸನ್ನಿಧಿಗಳು ಶ್ರೇಷ್ಠವಾದವು ಎಂಬ ಸತ್ಯದ ಅರಿವಾಗ ಬೇಕಿದೆ. ಮನೆಗಳು ಆ ಮನೆಯ ಮಂದಿಗಷ್ಟೇ ನೆರಳಾಗುತ್ತವೆ. ಆದರೆ ಶ್ರದ್ಧಾ ಕೇಂದ್ರಗಳು ಹಾಗೂ ವೃಕ್ಷಗಳು ನೂರಾರು ಮಂದಿಗೆ ನೆರಳಾಗುತ್ತವೆ. ಅಲ್ಲದೇ ಶಾಂತಿ ನೆಮ್ಮದಿ ನೀಡುವ ತಾಣ ಗಳು ಎಂಬ ವಾಸ್ತವದ ಅರಿವಾಗಬೇಕಿದೆ ಎಂದಿದ್ದಾರೆ.
-ಕೆ. ಎಸ್. ಮೂರ್ತಿ, ಕುಶಾಲನಗರ.