ಮಡಿಕೇರಿ, ಡಿ. 6: ಗುರುಕುಲ ಕಲಾಪ್ರತಿಷ್ಠಾನದ ಜಿಲ್ಲಾಘಟಕದ ವತಿಯಿಂದ ಹುತ್ತರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರುಬಾಯಿಗಳ ರಚನೆ (1. ರೈತ 2. ಸುಗ್ಗಿ) ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸುಮಾರು 125 ಸ್ಪರ್ಧಿಗಳು ಭಾಗವಹಿಸಿದ್ದು, ಬಾದುಮಂಡ ಬೀನ ಕಾಳಯ್ಯ (ಕೊಡಗು) ಇವರು ‘ವಾರದ ಪ್ರಶಸ್ತಿ’ಗೆ ಭಾಜನರಾದರು. ಅತ್ಯುತ್ತಮ ಸ್ಥಾನವನ್ನು ಕಿಗ್ಗಾಲು ಎಸ್. ಗಿರೀಶ್ (ಕೊಡಗು), ಬಿಟ್ಟೀರ ಚೋಂದಮ್ಮ ಶಂಭು (ಕೊಡಗು) ಹಾಗೂ ಶೋಭಾರಾಣಿ ಸಿ.ಆರ್. (ತುಮಕೂರು) ಅವರುಗಳು ಪಡೆದುಕೊಂಡರು. ಉತ್ತಮ ಸ್ಥಾನವನ್ನು ಪೂಡನೋಲನ ಈಶ್ವರ ತಮ್ಮಯ್ಯ (ಕೊಡಗು), ಸಹೇಚ (ಪರಮವಾಡಿ) ಉತ್ತರ ಕನ್ನಡ ಹಾಗೂ ಪ್ರಭಾವತಿ ಶೆಡ್ತಿ (ಉಡುಪಿ) ಪಡೆದುಕೊಂಡರು ಎಂದು ಘಟಕದ ಅಧ್ಯಕ್ಷೆ ಕೆ. ಶೋಭಾರಕ್ಷಿತ್ ತಿಳಿಸಿದ್ದಾರೆ.