ಸೋಮವಾರಪೇಟೆ, ಡಿ. 7: ಇನ್ನರ್‍ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಶಾಲಾ ಮಕ್ಕಳಿಗೆ ಆನ್‍ಲೈನ್ ಮೂಲಕ ಚಿತ್ರಕಲಾ ಸ್ಪರ್ಧೆಯನ್ನು ಈಚೆಗೆ ಆಯೋಜಿಸಲಾಗಿತ್ತು.

9ರಿಂದ 12 ವರ್ಷ ಒಳಗಿನ ವಿಭಾಗದಲ್ಲಿ ಎಸ್.ಎಸ್.ವಿನ್ಸಿ (ಪ್ರಥಮ), ಶ್ರೇಯಾಶೆಟ್ಟಿ (ದ್ವಿತೀಯ), ಎನ್.ಜಿ.ಧನುಷ್ (ತೃತೀಯ), ಸಮಾಧಾನಕರ ಬಹುಮಾನವನ್ನು ಪಿ.ಎನ್.ಯಾಮಿನಿ, ಜಿ.ಎಂ.ದಿಯಾ, ಸಿ.ಪಿ.ವಿದ್ಯಾಲಕ್ಷ್ಮೀ ಪಡೆದರು.

13ರಿಂದ 16 ವರ್ಷದೊಳಗಿನ ವಿಭಾಗದಲ್ಲಿ ಜಿ.ಪಿ.ಲಿಖಿತ (ಪ್ರ), ಎನ್.ಜಿ.ಮನಶ್ರೀ (ದ್ವಿ), ವೈ.ಬಿ.ಲಕ್ಷ್ಮೀ (ತೃ) ಹಾಗೂ ಸಮಾಧಾನಕರ ಬಹುಮಾನವನ್ನು ಪ್ರತೀಕ್‍ಶೆಟ್ಟಿ ಪಡೆದರು. ಜೂನಿಯರ್ ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಲಬ್‍ನ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಉಪಾಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಸರಿತಾ ರಾಜೀವ್, ಖಜಾಂಚಿ ನಂದಿನಿ ಬಹುಮಾನ ವಿತರಿಸಿದರು.