ಮಡಿಕೇರಿ, ಡಿ. 7: ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಲೋವರ್ ಡಿವಿಷನ್ ಕ್ಲರ್ಕ್ (ಎಲ್‍ಡಿಸಿ), ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ (ಜೆಎಸ್‍ಎ), ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ ಹುದ್ದೆಗಳನ್ನು ಭರ್ತಿ ಮಾಡಲು ಕಂಬೈನ್ಡ್ ಹೈಯರ್ ಸೆಕಂಡರಿ ಲೆವೆಲ್ ಪರೀಕ್ಷೆ-2020 ಕಂಪ್ಯೂಟರ್ ಬೇಸ್ಡ್ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ತಾ. 15 ಕೊನೆಯ ದಿನವಾಗಿದೆ. ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ (ಸಿ ಆಂಡ್ ಎಜಿ) ಇಲಾಖೆಯ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದೊಂದಿಗೆ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ್ದು ಹಾಗೂ ಟೈಪ್‍ಸ್ಪೀಡ್ 15000 ಕೀಗಳು ಪ್ರತೀ ಗಂಟೆಗೆ ಟೈಪಿಂಗ್ ಸಾಮಥ್ರ್ಯ ಹೊಂದಿರಬೇಕು. (ಟೈಪಿಂಗ್ ಪರೀಕ್ಷೆ ಅವಧಿ 15 ನಿಮಿಷಗಳು)

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ (ಸಿ ಆಂಟ್ ಎಜಿ ಇಲಾಖೆ ಹೊರತುಪಡಿಸಿ) ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ್ದು, ಹಾಗೂ ಟೈಪ್ ಸ್ಪೀಡ್ 8000 ಕೀಗಳು ಪ್ರತಿ ಗಂಟೆಗೆ ಟೈಪಿಂಗ್ ಸಾಮಥ್ರ್ಯ ಹೊಂದಿರಬೇಕು. (ಟೈಪಿಂಗ್ ಪರೀಕ್ಷೆ ಅವಧಿ 15 ನಿಮಿಷ.)

ಉಳಿದ ಎಲ್ಲಾ ಹುದ್ದೆಗಳಿಗೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು. ಟೈಪಿಂಗ್ ಇಂಗ್ಲಿಷ್ ವಿಭಾಗದಲ್ಲಿ 35 ಪದಗಳು ಪ್ರತಿ ನಿಮಿಷಕ್ಕೆ ಹಾಗೂ ಹಿಂದಿ ವಿಭಾಗದಲ್ಲಿ 30 ಪದಗಳು ಪ್ರತೀ ನಿಮಿಷಕ್ಕೆ ಟೈಪಿಂಗ್ ಸಾಮಥ್ರ್ಯ ಹೊಂದಿರಬೇಕು. (ಟೈಪಿಂಗ್ ಪರೀಕ್ಷೆ ಅವಧಿ 15 ನಿಮಿಷಗಳು).

2021ರ ಜನವರಿ, 1ಕ್ಕೆ ಅನ್ವಯವಾಗುವಂತೆ ಕನಿಷ್ಟ 18 ರಿಂದ 27 ವರ್ಷಗಳೂ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ, ಪಿ.ಡಬ್ಲ್ಯುಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಶುಲ್ಕವನ್ನು ಪಾವತಿಸಲು ತಾ. 17 ಕೊನೆಯ ದಿನವಾಗಿದೆ. ಆನ್‍ಲೈನ್, ನೆಟ್ ಬ್ಯಾಂಕಿಂಗ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಲನ್ ಮುಖಾಂತರ ಶುಲ್ಕ ಪಾವತಿ ಮಾಡಬಹುದಾಗಿದೆ. ಸಾಮಾನ್ಯ ವರ್ಗ, ಪ್ರವರ್ಗ-2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ ರೂ. 100, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿ.ಡಬ್ಲ್ಯುಡಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುವುದಿಲ್ಲ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ hಣಣಠಿs://ssಛಿ.ಟಿiಛಿ.iಟಿ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.