ಸೋಮವಾರಪೇಟೆ, ಡಿ.7: ಕೊರೊನಾ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದ ನಗರಳ್ಳಿ-ಕೂತಿ-ತೋಳೂರುಶೆಟ್ಟಳ್ಳಿ ಮಾರ್ಗದ ಸರಕಾರಿ ಬಸ್ ಸಂಚಾರ ಪುನರಾರಂಭಗೊಂಡಿದೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪ್ರಮುಖ ಗ್ರಾಮಗಳಾದ ನಗರಳ್ಳಿ, ಕೂತಿ, ಇನಕನಳ್ಳಿ, ತೋಳೂರುಶೆಟ್ಟಳ್ಳಿ ಗ್ರಾಮಗಳಿಗೆ ಸಂಚರಿಸುತ್ತಿದ್ದ ಬಸ್ನ್ನು ಕೊರೊನಾ ಲಾಕ್ಡೌನ್ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು.
ತದನಂತರವೂ ಬಸ್ ಸಂಚಾರ ಪುನರಾರಂಭಗೊಳ್ಳದೆ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಇದೀಗ ಶಾಸಕ ಅಪ್ಪಚ್ಚು ರಂಜನ್ರವರ ಪ್ರಯತ್ನದಿಂದ ಬಸ್ ಸಂಚಾರ ಪುನರಾರಂಭವಾಗಿದ್ದು, ಈ ಹಿಂದಿನಂತೆ ಸೋಮವಾರಪೇಟೆ ಬಸ್ನಿಲ್ದಾಣದಿಂದ ಬೆಳಗ್ಗೆ 8.15ಕ್ಕೆ ಹೊರಟು ನಗರಳ್ಳಿ-ಕೂತಿ-ತೋಳೂರುಶೆಟ್ಟಳ್ಳಿ ಮಾರ್ಗವಾಗಿ ತೆರಳಿ ಅದೇ ಮಾರ್ಗವಾಗಿ ವಾಪಸ್ ಬರಲಿದೆ. ಸಂಜೆ 4.15ಕ್ಕೆ ಪಟ್ಟಣದಿಂದ ಹೊರಟು ತೋಳೂರುಶೆಟ್ಟಳ್ಳಿ-ಕೂತಿ-ನಗರಳ್ಳಿ ಮಾರ್ಗವಾಗಿ ತೆರಳಿ ಸಂಜೆ ವಾಪಸ್ ಪಟ್ಟಣಕ್ಕೆ ಆಗಮಿಸಲಿದೆ.