ಮಡಿಕೇರಿ, ಡಿ. 7: ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಕೊಡಗು ಜಿಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಒಟ್ಟು 66 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ನಾಮಪತ್ರಗಳನ್ನು ಸಲ್ಲಿಸಲು ತಾ, 11 ಕೊನೆಯ ದಿನವಾಗಿದೆ. ತಾ. 12 ರಂದು ನಾಮಪತ್ರ ಪರಿಶೀಲನೆ, ತಾ. 14 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ತಾ. 22 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನ ಗಾಳಿಬೀಡು (10 ಸ್ಥಾನ), ಮಕ್ಕಂದೂರು(7), ಕಳಕೇರಿ ನಿಡುಗಣೆ (10), ಕಡಗದಾಳು (11), ಮರಗೋಡು (10), ಹೊಸ್ಕೇರಿ (9), ಕಾಂತೂರು ಮೂರ್ನಾಡು (21), ಹೊದ್ದೂರು (15), ಹಾಕತ್ತೂರು (8), ಮೇಕೇರಿ (10), ಬೆಟ್ಟಗೇರಿ (16), ಮದೆ (13), ಸಂಪಾಜೆ (8), ಚೆಂಬು (10), ಪೆರಾಜೆ (10), ಕರಿಕೆ (11), ಭಾಗಮಂಡಲ (11), ಅಯ್ಯಂಗೇರಿ (7), ಕುಂದಚೇರಿ (8), ಬೇಂಗೂರು ಚೇರಂಬಾಣೆ (12), ಬಲ್ಲಮಾವಟಿ (8), ಎಮ್ಮೆಮಾಡು (9), ನಾಪೋಕ್ಲು (23), ಕುಂಜಿಲ (ಕಕ್ಕಬ್ಬೆ) (14), ಕೊಣಂಜಗೇರಿ (ಪಾರಾಣೆ) (9), ನರಿಯಂದಡ (15) ಒಟ್ಟು 295 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ (15), ಬ್ಯಾಡಗೊಟ್ಟ (9), ಬೆಸ್ಸೂರು (13), ಹಂಡಿ ್ಲ(11), ಶನಿವಾರಸಂತೆ (10), ದುಂಡಳ್ಳಿ (13), ನಿಡ್ತ (13), ಆಲೂರು (15), ಗೌಡಳಿ ್ಳ(10), ದೊಡ್ಡಮಳ್ತೆ (9), ಶಾಂತಳ್ಳಿ (7), ತೋಳೂರು ಶೆಟ್ಟಳ್ಳಿ (8), ಬೆಟ್ಟದಳ್ಳಿ (7), ಹಾನಗಲ್ಲು (12), ಚೌಡ್ಲು (14), ಬೇಳೂರು (15), ಕಿರಗಂದೂರು (10), ಐಗೂರು (11), ನೇರುಗಳಲೆ (12), ಗಣಗೂರು(8), ನೆಲ್ಲಿಹುದಿಕೇರಿ (20), ವಾಲ್ನೂರು ತ್ಯಾಗತ್ತೂರು (11), ನಂಜರಾಯಪಟ್ಟಣ (8), ಗುಡ್ಡೆಹೊಸೂರು (18), ಕೂಡಿಗೆ (15), ಕೂಡುಮಂಗಳೂರು (24), ಮುಳ್ಳುಸೋಗೆ (23), ಹೆಬ್ಬಾಲೆ (14), ತೊರೆನೂರು (10), ಶಿರಂಗಾಲ (9), ಚೆಟ್ಟಳ್ಳಿ (15), ಕೆದಕಲ್ (8), ಕೊಡಗರಹಳ್ಳಿ (10), ಕಂಬಿಬಾಣೆ (6), 7ನೇ ಹೊಸಕೋಟೆ (10), ನಾಕೂರು ಶಿರಂಗಾಲ (8), ಸುಂಟಿಕೊಪ್ಪ (20), ಹರದೂರು (11), ಮಾದಾಪುರ (16) ಮತ್ತು ಗರ್ವಾಲೆ (5) ಒಟ್ಟು 483 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.