ಚೆಟ್ಟಳ್ಳಿ, ಡಿ. 7: ಮಡಿಕೇರಿ ಸಮೀಪದ ಕಡಗದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾಕ್ಟಿವಾದಲ್ಲಿ ಬಂದ ಯುವಕನೊಬ್ಬ ಸಮೀಪದ ಹೋಂಸ್ಟೇಯ ತರಕಾರಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೋರಿಯೊಳೆಗೆ ಎಸೆದು ತೆರಳುತ್ತಿದ್ದ. ಕಡಗದಾಳು ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಮಾದೇಟಿರ ತಿಮ್ಮಯ್ಯ ತನ್ನ ಜೀಪಿನಲ್ಲಿ ಅಡ್ಡಗಟ್ಟಿ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಮಾಲೀಕ ಕಸವನ್ನು ಎಸೆಯಲು ತಿಳಿಸಿದ ಬಗ್ಗೆ ಯುವಕ ಹೇಳಿದ್ದು, ಮಾಲೀಕರಿಗೆ ಯುವಕನಿಂದಲೇ ಫೋನಾಯಿಸಿ ಸ್ಥಳಕ್ಕೆ ಬರಲು ತಿಮ್ಮಯ್ಯ ತಿಳಿಸಿದ್ದಾರೆ.

ಹೋಂಸ್ಟೇ ಮಾಲೀಕ ಸ್ಥಳಕ್ಕೆ ಆಗಮಿಸುತಿದ್ದಂತೆ ಮಾದೇಟಿರ ತಿಮ್ಮಯ್ಯ, ಕೊಡಗು ಜಿಲ್ಲಾ ಹೋಂಸ್ಟೇ ಸಂಘದ ಅಧ್ಯಕ್ಷ ಅನಂತಶಯನ, ಪುತ್ತರಿರ ಪಪ್ಪುತಿಮ್ಮಯ್ಯ ಕಡಗದಾಳು ಪಂಚಾಯಿತಿ ಪಿಡಿಓ ದೇವಿಕಾ ಹಾಗೂ ಕಾರ್ಯದರ್ಶಿ ಕುಮಾರಸ್ವಾಮಿ ಹೋಂಸ್ಟೇ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಪಂಚಾಯಿತಿ ವತಿಯಿಂದ ರೂ. 1,000 ದಂಡ ವಿಧಿಸಲಾಯಿತು.