ಮಡಿಕೇರಿ, ಡಿ. 6: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ವತಿಯಿಂದ ಬಾಚಮಾಡ.ಡಿ.ಗಣಪತಿ ಇವರ 100ನೇ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ತಾ. 13 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಫಿ ಬೆಳೆಗಾರರಾದ ತೀತರಮಾಡ ಶಶಿ ಗಣಪತಿ ಇವರು ದ್ವಾರ ಉದ್ಘಾಟನೆ ಮಾಡಲಿದ್ದಾರೆ. ನಂತರ ನಿವೃತ್ತ ಶಿಕ್ಷಕಿಯಾದ ಕುಂಞಂಗಡ ಯಶೋಧ ಇವರು ಬಿ.ಡಿ.ಗಣಪತಿಯವರ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.
ಬಾಚಮಾಡ ಕುಟುಂಬದ ಮುಖ್ಯಸ್ಥರಾಗಿರುವ ಬಾಚಮಾಡ ಚಿಣ್ಣಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಮಾಚಿಮಾಡ ರವೀಂದ್ರ ಮತ್ತು ಕಾಫಿ ಬೆಳೆಗಾರರಾದ ಕರ್ತಂಗಡ ವಿಶ್ವನಾಥ್ ಅವರು ಭಾಗವಹಿಸಲಿದ್ದಾರೆ. ತೀತರಮಾಡ ಲಾಜ್ ಅವರು ಶತಮಾನೋತ್ಸವ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನಂತರ ನಡೆಯುವ ವಿಚಾರಗೋಷ್ಠಿ-1 ಕಾರ್ಯಕ್ರಮದಲ್ಲಿ “ಬಾಚಮಾಡ.ಡಿ.ಗಣಪತಿ-ಬದ್‍ಕ್ ಪಿಂಞ ಸಾಧನೆ” ಎಂಬ ವಿಷಯದ ಬಗ್ಗೆ ಹಿರಿಯ ಜಾನಪದ ಸಾಹಿತಿಯಾದ ಬಾಚರಣಿಯಂಡ.ಪಿ.ಅಪ್ಪಣ್ಣ ಅವರು ಹಾಗೂ ವಿಚಾರಗೋಷ್ಠಿ-2ರಲ್ಲಿ “ನಾ ಕಂಡನ್ನಕೆ ಬಾಚಮಾಡ ಡಿ.ಗಣಪತಿ” ಎಂಬ ವಿಷಯದ ಬಗ್ಗೆ ಬ್ರಹ್ಮಗಿರಿ ಪತ್ರಿಕೆಯ ಸಂಪಾದಕರಾದ ಉಳ್ಳಿಯಡ.ಎಂ.ಪೂವಯ್ಯ ಅವರು ವಿಚಾರ ಮಂಡನೆಯನ್ನು ಮಾಡಲಿದ್ದಾರೆ. ನಂತರ ರಸಪ್ರಶ್ನೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಪ್ರಕಟಿತ ಪುಸ್ತಕ ಮತ್ತು ಸಿ.ಡಿ.ಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.