ಪೆÇನ್ನಂಪೇಟೆ, ಡಿ.6: ವೀರಾಜಪೇಟೆ ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲಿನ ಕೆ.ಆರ್. ವಿಜು ವಿಶ್ವನಾಥ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪೆÇನ್ನಂಪೇಟೆಯಲ್ಲಿ ಇತ್ತೀಚಿಗೆ ನಡೆದ ಸಂಘದ ಮಹಾಸಭೆಯಲ್ಲಿ ಮುಂದಿನ ಸಾಲಿನ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ನೂತನ ಕಾರ್ಯದರ್ಶಿಗಳಾಗಿ ಅಪ್ಪಂಡೇರಂಡ ದಿನೇಶ್ (ದಿನು) ಮತ್ತು ಕೋಶಾಧಿಕಾರಿಯಾಗಿ ಕೆ.ಯು. ತಿಮ್ಮಯ್ಯ(ತನು) ಅವರನ್ನು ಮಹಾಸಭೆ ಅವಿರೋಧವಾಗಿ ಆಯ್ಕೆಗೊಳಿಸಿತು.

ಉಳಿದಂತೆ ಸಂಘದ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿ. ಯು. ಸುಬ್ಬಯ್ಯ, ಎನ್. ರಮೇಶ್, ಎ.ಟಿ. ಸೋಮಣ್ಣ, ಕಿಶನ್ ಉತ್ತಪ್ಪ, ಎನ್.ಬಿ. ನವೀನ್, ವಿನ್ಸೆಂಟ್ ಮತ್ತು ಎ. ಆರ್. ವೇಣುಗೋಪಾಲ್ ಅವರು ಆಯ್ಕೆಗೊಂಡಿದ್ದಾರೆ.