ನಾಪೆÉÇೀಕ್ಲು, ಡಿ.6 : ಮಡಿಕೇರಿಗೆ ಹೋಗುವ ಉಡೋತ್‍ಮೊಟ್ಟೆ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನಗಳ ಓಡಾಟಕ್ಕೆ ಅಯೋಗ್ಯವಾಗಿತ್ತು. ಈ ರಸ್ತೆಯಲ್ಲಿ ಜನರು ಸಹ ನಡೆದಾಡಲು ತೊಂದರೆ ಅನುಭವಿಸುತ್ತಿರುವುದನ್ನು ಪತ್ರಿಕೆಯು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು. ಇದನ್ನು ಪರಿಗಣಿಸಿದ ಜಿಲ್ಲಾಡಳಿತ ಮತ್ತು ಶಾಸಕರು ಕೂಡಲೇ ಈ ರಸ್ತೆಯನ್ನು ಡಾಂಬರೀಕರಣ ಗೊಳಿಸಲು ಕಾರ್ಯಪ್ರವೃತರಾಗಿದ್ದಾರೆ.
ಅದರಂತೆ ಡಾಂಬರೀಕರಣ ಕಾಮಗಾರಿಯು ಬಿರುಸಿನಿಂದ ಸಾಗಿದ್ದು, ಈ ರಸ್ತೆಯು ಅಪ್ಪಂಗಳ ಬೈಪಾಸ್ ರಸ್ತೆಯವರೆಗೆ ಮುಂದುವರೆದರೆ ವಾಹನ ಚಾಲಕರು ಮತ್ತು ಮಾಲೀಕರಿಗೆ ಪ್ರಯೋಜನ ವಾಗಲಿದೆ. -ದುಗ್ಗಳ