ಮಡಿಕೇರಿ, ಡಿ. 6: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಅಕ್ರಮ ಮದ್ಯ ದಾಸ್ತಾನು/ ನಿಷೇದಿತ ಮದ್ಯ ದಾಸ್ತಾನು ಸಂಗ್ರಹಣೆ, ಮಾರಾಟ ಮತ್ತು ಸಾಗಾಣಿಕೆ ಹಾಗೂ ಇನ್ನಿತರ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸುವಂತೆ ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ ಕೋರಿದ್ದಾರೆ.
ಮಾಹಿತಿಯನ್ನು ಅಬಕಾರಿ ಆಯುಕ್ತರ ಕಚೇರಿ, ಕರ್ನಾಟಕ ರಾಜ್ಯ, ಬೆಂಗಳೂರು ಕಂಟ್ರೋಲ್ ರೂಂ ನಿರ್ವಹಣಾಧಿಕಾರಿ ದೂ.ಸಂ. 18004252550 (ಟ್ರೋಲ್ ಫ್ರೀ), ಅಬಕಾರಿ ಜಂಟಿ ಆಯುಕ್ತರ ಕಚೇರಿ, (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ, ಮಂಗಳೂರು ಕಚೇರಿ ದೂರವಾಣಿ-08242-225498, ಅಬಕಾರಿ ಉಪ ಆಯುಕ್ತರ ಕಚೇರಿ ಕೊಡಗು ಜಿಲ್ಲೆ, ಮಡಿಕೇರಿ ಕಂಟ್ರೋಲ್ ರೂಂ. ನಿರ್ವಹಣಾಧಿಕಾರಿ 08272-229110 (ಟೋಲ್ ಫ್ರೀ), ಅಬಕಾರಿ ಉಪ ಆಯುಕ್ತರು, ಮಡಿಕೇರಿ ಕೊಡಗು ಜಿಲ್ಲೆ 9449597135, ಅಬಕಾರಿ ನಿರೀಕ್ಷಕರು ವಿಚಕ್ಷಣಾ ದಳ 9449597137, ಅಬಕಾರಿ ನಿರೀಕ್ಷಕರ ಕಚೇರಿ, ಮಡಿಕೇರಿ ವಲಯ, ಅಬಕಾರಿ ನಿರೀಕ್ಷಕರು 9449597139, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಮಡಿಕೇರಿ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು 9449597780, ಅಬಕಾರಿ ನಿರೀಕ್ಷಕರ ಕಚೇರಿ, ಸೋಮವಾರಪೇಟೆ ವಲಯ, ಅಬಕಾರಿ ನಿರೀಕ್ಷಕರು 9449252456/ 9448675495, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಸೋಮವಾರಪೇಟೆ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು 9449597136, ಅಬಕಾರಿ ನಿರೀಕ್ಷಕರ ಕಚೇರಿ, ವೀರಾಜಪೇಟೆ ವಲಯ, ಅಬಕಾರಿ ನಿರೀಕ್ಷಕರು 9449597141, ಅಬಕಾರಿ ಉಪ ಅಧೀಕ್ಷಕರ ಕಚೇರಿ ವೀರಾಜಪೇಟೆ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು 9449597140 ನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.