ಮಡಿಕೇರಿ, ಡಿ. 5: 2018-19ರಲ್ಲಿ ಮಳೆಯಿಂದ ತೀವ್ರ ಹಾನಿಗೊಳಗಾಗಿದ್ದ ಮಡಿಕೇರಿ ತಾಲೂಕಿನ, ಡೈರಿಫಾರ್ಮ್‍ನಲ್ಲಿರುವ ಸ್ಟೋನ್ ಹಿಲ್ ಅಂಗನವಾಡಿ ಕೇಂದ್ರವನ್ನು ವಿ-ಗಾರ್ಡ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಡಿ ‘Woಡಿಟಜ ಗಿisioಟಿ’ ಅವರ ಮುಖಾಂತರ ಮರು ನಿರ್ಮಾಣ ಮಾಡಲಾಗಿದ್ದು, ತಾ.4ರಂದು ಆನ್‍ಲೈನ್ ಮುಖಾಂತರ ಲೋಕಾರ್ಪಣೆ ಮಾಡಲಾಯಿತು.
ಪ್ರತ್ಯೇಕ ಅಡಿಗೆ ಮನೆ, ಶಿಶು ಸ್ನೇಹಿ ಶೌಚಾಲಯ, ಚಿತ್ತಾಕರ್ಷಕ ಗೋಡೆ ಬರಹ, ಅತ್ಯಾಕರ್ಷಕ ಬೃಹತ್ ಆಟಿಕೆ ಸಾಮಗ್ರಿಗಳು, ಮಕ್ಕಳಿಗಾಗಿ ಟೇಬಲ್‍ಗಳನ್ನು ಒಳಗೊಂಡ ಸುಸಜ್ಜಿತ ಅಂಗನವಾಡಿಯನ್ನು ಮಡಿಕೇರಿ ಡೈರಿ ಫಾರ್ಮ ಬಡಾವಣೆಗೆ ವಿ-ಗಾರ್ಡ್ ಸಂಸ್ಥೆಯವರು ನಿರ್ಮಿಸಿದ್ದಾರೆ. ಆನ್‍ಲೈನ್ ಮುಖಾಂತರ ನಡೆದ ಸರಳ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಲಾಯಿತು.
‘Woಡಿಟಜ ಗಿisioಟಿ’ ಸಂಸ್ಥೆಯ ಸೋನಿ ಥಾಮಸ್ ಎಲ್ಲರನ್ನು ಸ್ವಾಗತಿಸಿದರು, ಸಿ.ಇ.ಓ ಆದ ಮಾಧವ ಬೆಳ್ಳಿಕೊಂಡ ಇವರು ಪ್ರಸ್ತಾವಿಕ ಮಾತುಗಳನ್ನಾಡಿದರು, ವಿ-ಗಾರ್ಡ್ ಸಂಸ್ಥೆ ನಿರ್ದೇಶಕ ರಾಮಚಂದ್ರನ್ ವೆಂಕಟರಾಮನ್ ಉದ್ಘಾಟನೆ ನುಡಿಗಳನ್ನಾಡಿದರು. ವಿ-ಗಾರ್ಡ್ ಸಿ.ಎಸ್.ಆರ್ ವಿಭಾಗದ ಉಪಾಧ್ಯಕ್ಷ ಆಂತೋಣಿ ಸೆಬಾಸ್ಟಿನ್, ವಿ-ಗಾರ್ಡ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಸೂರ್ಯ ಪ್ರಸಾದ್, ವ್ಯವಸ್ಥಾಪಕ ಹರ್ಷೆಂದ್ರ ಪ್ರಸಾದ್, ವಿನೀಶ್ ಮತ್ತು ನಿರ್ಮಾಣ ಕಾರ್ಯ ವಹಿಸಿಕೊಂಡಿದ್ದ ‘Woಡಿಟಜ ಗಿisioಟಿ’ ಸಂಸ್ಥೆಯ ಜಾನ್ ಮಾರ್ಟಿನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ಅರುಂಧತಿ ಟಿ.ಎಸ್, ಮೇಲ್ವಿಚಾರಿಕಿಯರಾದ ಶೀಲಾ ಕೆ. ಹಾಗೂ ರೀತಾ, ಅಂಗನವಾಡಿ ಕಾರ್ಯಕರ್ತೆಯರಾದ ನಾಗರತ್ನ ಹಾಗೂ ರತ್ನ ಅವರು ಹಾಜರಿದ್ದರು.