ಶ್ರೀಮಂಗಲ, ಡಿ. 4: ದಕ್ಷಿಣ ಕೊಡಗಿನ ಶ್ರೀಮಂಗಲ-ಕುಟ್ಟ ಅಂತರ ರಾಜ್ಯ ಹೆದ್ದಾರಿ ಬದಿ ಶ್ರೀಮಂಗಲ ಗ್ರಾಮದ ಕೂರ್ಗ್ ಗೆಸ್ಟ್ ಹೌಸ್ ಬಳಿ ಪಾಳು ಬಾವಿಗೆ ಹುಲಿ ಬಿದ್ದು ಸಾವಿಗೀಡಾಗಿದೆ.

ಮುಖ್ಯ ರಸ್ತೆಯ ಬದಿಯಲ್ಲಿರುವ ತಡಿಯಂಗಡ ಗಣೇಶ್ ಅವರ ಜಾಗದಲ್ಲಿರುವ ಪಾಳು ಬಿದ್ದ ಸುಮಾರು 15 ಅಡಿ ಆಳವಿರುವ ಮತ್ತು ಸ್ವಲ್ಪ ಪ್ರಮಾಣದಲ್ಲಿ ನೀರು ಇರುವ ಬಾವಿಗೆ ಹುಲಿ ಬಿದ್ದಿದೆ. ಹುಲಿ ಬಿದ್ದು ಸುಮಾರು 4-5 ದಿನ ಆದ ಕಾರಣ ಹುಲಿ ಕಳೇಬರ ಕೊಳೆತು ವಾಸನೆ ಬರುತ್ತಿತ್ತು. ಸುತ್ತಮುತ್ತ ನಿವಾಸಿಗಳು ದುರ್ವಾಸನೆ ಹಿನ್ನೆಲೆ ಪರಿಶೀಲನೆ ಮಾಡಿದಾಗ ಹುಲಿ ಸಾವಿನ್ನಪ್ಪಿರುವುದು ಪತ್ತೆಯಾಗಿದೆ.ಹುಲಿ ಕಳೇಬರ ಕೊಳೆತು ಹೋಗಿದ್ದು, ಮರಣೋತ್ತರ ಪರೀಕ್ಷೆ ನಂತರವಷ್ಟೇ ಹುಲಿ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿ ಬಸಣ್ಣವರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಸಂಜೆ ವೇಳೆಗೆ ಬಾವಿಯಲ್ಲಿದ್ದ ಹುಲಿಯ ಕಳೆಬರವನ್ನು ಮೇಲೆತ್ತ ಲಾಯಿತು. ಬಾವಿಗೆ ಬಿದ್ದು ಸತ್ತಿರುವ ಹುಲಿ 8 ರಿಂದ 9 ವರ್ಷದ ಗಂಡು ಹುಲಿ

(ಮೊದಲ ಪುಟದಿಂದ) ಎಂದು ಗುರುತಿಸಲಾಗಿದೆ. ಹಲ್ಲು ಮತ್ತು ಉಗುರು ದುರ್ಬಲವಾಗಿರುವುದು ಗೋಚರಿಸಿದೆ. ಉಗುರು ಸವೆದು ಹೋಗಿರುವುದು ಕಂಡುಬಂದಿದೆ ಎಂದು ಹುಣಸೂರು ಆನೆ ಪ್ರಭಾರಕ ಡಾ. ಮುಜೀಬ್ ತಿಳಿಸಿದ್ದಾರೆ. ವೀರಾಜಪೇಟೆ ಡಿಎಫ್‍ಓ ಚಕ್ರಪಾಣಿ, ತಿತಿಮತಿ ವನ್ಯ ಜೀವಿ ವಿಭಾಗದ ಎ. ಸಿ.ಎಫ್. ಪಂದ್ಯಂಡ ಉತ್ತಪ್ಪ, ಶ್ರೀಮಂಗಲ ವನ್ಯಜೀವಿ ವಿಭಾಗದ ಆರ್.ಎಫ್.ಓ ವೀರೇಂದ್ರ ಮರಿಬಸಣ್ಣವರ್, ಪೆÇನ್ನಂಪೇಟೆ ಆರ್.ಎಫ್.ಓ. ರಾಜಪ್ಪ, ಡಿ.ವೈ.ಆರ್.ಎಫ್.ಓ. ಗಣೇಶ್, ರವಿಕಿರಣ್, ಮಂಜುನಾಥ, ಬೋಪಣ್ಣ, ಫಾರೆಸ್ಟ್ ಗಾರ್ಡ್‍ಗಳಾದ ಸಂಜಯ್, ದಿವಾಕರ್, ಚೇತನ್, ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಗಳು, ಹುಣಸೂರು ಆನೆ ಪ್ರಭಾರಕ ಡಾ.ಮುಜೀಬ್, ಕುಟ್ಟ ವೃತ್ತ ನಿರೀಕ್ಷಕ ಪರಾಶಿವ ಮೂರ್ತಿ, ಉಪ ನಿರೀಕ್ಷಕ ರವಿ ಶಂಕರ್, ಕೊಡಗು ವನ್ಯ ಜೀವಿ ಸಂಘದ ಉಪಾಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ ಮತ್ತಿತರರು ಹಾಜರಿದ್ದರು.