ಸೋಮವಾರಪೇಟೆ, ಡಿ. 5: ಪಟ್ಟಣದಲ್ಲಿ ಅಪರಾಧ ತಡೆ ಹಾಗೂ ಸಂಚಾರ ವ್ಯವಸ್ಥೆಗೆ ಸಿ.ಸಿ. ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಲಾಗುತ್ತಿದ್ದು, ಆಯಕಟ್ಟಿನ 8 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ವೃತ್ತ ನಿರೀಕ್ಷಕ ಮಹೇಶ್ ತಿಳಿಸಿದರು. ಪಟ್ಟಣದ ಪೆÇಲೀಸ್ ಠಾಣಾ ಆವರಣದಲ್ಲಿ ಆಯೋಜಿಸಿದ್ದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.

ಪರಿಹಾರ ಕಾಣಬೇಕಾಗಿದೆ. ಸಾಧ್ಯವಾದಷ್ಟು ವರ್ತಕರು ತಮ್ಮ ಅಂಗಡಿಗಳಲ್ಲಿ ಸಿ.ಸಿ. ಕ್ಯಾಮೆರಾ ಮತ್ತು ಸೈರನ್ ಅಳವಡಿಸಿಕೊಳ್ಳಬೇಕು ಎಂದರು. ಖಾಸಗಿ ಬಸ್ ನಿಲ್ದಾಣದಲ್ಲಿ ಸಂಜೆ 7 ಗಂಟೆಯ ನಂತರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಅಲ್ಲಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ, ರಸ್ತೆಯ ಎರಡು ಬದಿಯಲ್ಲಿ ನಿಲುಗಡೆಗೆ ಅವಕಾಶ ನೀಡಬಾರದು. ಕರ್ಕಶ ಹಾರನ್, ವೇಗವಾಗಿ ಓಡಿಸುವ ಹಾಗೂ ಹೆಲ್ಮೆಟ್ ಹಾಕದ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಳ್ಳಿ, ಗೊತ್ತಿಲ್ಲದೆ ಏಕಮುಖ ಸಂಚಾರದಲ್ಲಿ ಬರುವ ಪ್ರವಾಸಿಗರಿಗೆ ವಿನಾಯಿತಿ ನೀಡಿ ಎಂದು ವರ್ತಕರು ಸಲಹೆ ನೀಡಿ ದರು. ಈ ಸಂದರ್ಭ ಠಾಣಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.