ಮಡಿಕೇರಿ, ಡಿ. 5: ಕೃಷಿ ಪ್ರಧಾನ ವಾಗಿರುವ ಕೊಡಗು ಜಿಲ್ಲೆಯಲ್ಲಿ ಇದಕ್ಕೆ ಪೂರಕವಾಗಿರುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಪುತ್ತರಿಯ ವೈಭವ ಇದೀಗ ಜಿಲ್ಲೆಯ ವಿವಿಧೆಡೆ ಗಳಲ್ಲಿ ಕಂಡುಬರುತ್ತಿದೆ. ಸಾಂಪ್ರದಾ ಯಿಕವಾಗಿ ಕದಿರು ತೆಗೆದ ಬಳಿಕ ಜಿಲ್ಲೆಯ ವಿಶಿಷ್ಟತೆಯಲ್ಲಿ ಒಂದಾಗಿರುವ ಪುತ್ತರಿ ಕೋಲಾಟ್, ಮಂದ್ಗಳಲ್ಲಿ ಸಂಸ್ಕøತಿ-ಪರಂಪರೆ ಜರುಗುವುದು ವಾಡಿಕೆ. ಇದೀಗ ಕಂಡುಬರುತ್ತಿರುವ ಹೊಸ ಬೆಳವಣಿಗೆ ಎಂದರೆ ಕೆಲವು ವರ್ಷಗಳಿಂದ ಮರೆಯಾದಂತಿದ್ದ ಈ ಮಂದ್-ಮಾನಿಗಳ ಸಂಭ್ರಮ ಇದೀಗ ಮಗದೊಮ್ಮೆ ಪುರಾತನ ವೈಭವವನ್ನು ವಾಡಿಕೆ. ಇದೀಗ ಕಂಡುಬರುತ್ತಿರುವ ಹೊಸ ಬೆಳವಣಿಗೆ ಎಂದರೆ ಕೆಲವು ವರ್ಷಗಳಿಂದ ಮರೆಯಾದಂತಿದ್ದ ಈ ಮಂದ್-ಮಾನಿಗಳ ಸಂಭ್ರಮ ಇದೀಗ ಮಗದೊಮ್ಮೆ ಪುರಾತನ ವೈಭವವನ್ನು ಶೀಲವಾಗಿದ್ದರೂ ಚಟುವಟಿಕೆಗಳು ನೀರಳವಾಗಿ ಕಂಡುಬರುತ್ತಿದ್ದವು. ಇದೀಗ ಕೊರೊನಾ ಪರಿಸ್ಥಿತಿ ಒಂದೆಡೆ ಯಿದ್ದರೂ ಜಿಲ್ಲೆಯ ವಿವಿಧ ಮಂದ್ ಗಳಲ್ಲಿ ನವೋಲ್ಲಾಸ ಮೂಡಿದಂತಿದೆ. ಪರಂಪರೆಗೊಳ ಪಟ್ಟಂತಹ ಕಾರ್ಯ ಚಟುವಟಿಕೆಗಳು ವಿಜೃಂಭಣೆಯ ಸ್ವರೂಪ ಪಡೆದು ಕೊಳ್ಳುತ್ತಿದೆಯಲ್ಲದೆ ಜನಾಂಗವನ್ನು ಈ ಮೂಲಕ ಮತ್ತೆ ಬೆಸೆಯುವಂತೆ ಮಾಡುತ್ತಿರುವ ಬೆಳವಣಿಗೆ ಕಂಡು ಬರುತ್ತಿದೆ.
ಮಂದ್ ಸಂಸ್ಕøತಿಯನ್ನು ಅನು ಸರಿಸುವ ಕೊಡವ ಜನಾಂಗದಲ್ಲಿ ಅವರವರ ಹಾಗೂ ಕುಟುಂಬದ ವಿಚಾರಗಳು ಐನ್ಮನೆಗಳ ವ್ಯಾಪ್ತಿ ಯಲ್ಲಿ ನಡೆದರೆ, ಸಾಮಾಜಿಕವಾದ ಚಟುವಟಿಕೆಗಳು ಇತರ ಕುಟುಂಬ ಗಳು, ಊರಿನವರ ಸಹಭಾಗಿತ್ವ ದೊಂದಿಗೆ ಮಂದ್ಗಳಲ್ಲಿ ನಡೆದು ಕೊಂಡು ಬರುತ್ತಿದ್ದವು. ಇದಕ್ಕೆ ಅನುಗುಣವಾಗಿ
(ಮೊದಲ ಪುಟದಿಂದ) ಕೇರಿಮಂದ್, ಊರ್ಮಂದ್, ನಾಡ್ಮಂದ್, ಸೀಮೆಮಂದ್ (ವಿವಿಧ ಕೇರಿ, ಊರು, ನಾಡುಗಳು ಸೇರಿ ಆಚರಿಸುವ ಪದ್ಧತಿ) ಎಂಬ ಪರಿಪಾಲನೆ ಈ ಹಿಂದಿನಿಂದ ರೂಢಿಯಲ್ಲಿತ್ತು.
ಸಾಂಸ್ಕøತಿಕ ಹಾಗೂ ಧಾರ್ಮಿಕ ಕೇಂದ್ರವಾದ ಈ ಮಂದ್ಗಳು ನ್ಯಾಯ ಪೀಠದಂತೆ ಮಾತ್ರವಲ್ಲದೆ ವೈವಿಧ್ಯಮಯವಾದ ಕಾರ್ಯಚಟುವಟಿಕೆಗಳ, ಪ್ರತಿಭೆ ಅನಾವರಣದ ಸ್ಥಳವಾಗಿಯೂ ಚಾಲ್ತಿಯಲ್ಲಿದ್ದವು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಅದರಲ್ಲೂ ಆರ್ಥಿಕ-ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯದ ಋಣಾತ್ಮಕ ಅಂಶಗಳಿಂದಾಗಿ ಬಹುತೇಕ ಮಂದ್ಗಳು ತೆರೆಮರೆಗೆ ಸರಿದಂತಿದ್ದವು. ಕೆಲವು ಮಂದ್ಗಳು ಕಾರ್ಯನಿರ್ವಹಿಸುತ್ತಿದ್ದರೂ ಚಟುವಟಿಕೆ ಕ್ಷೀಣವಾಗಿತ್ತು.
ಬಹುತೇಕ ಕಡೆಗಳಲ್ಲಿ ಕೇರಿ ಮಂದ್-ಊರ್ಮಂದ್ಗಳು ಸ್ಥಗಿತಗೊಂಡಿದ್ದವು. ಇದೀಗ ಇತ್ತೀಚಿನ ಕೆಲವು ವರ್ಷಗಳಿಂದ ಯುಕೋ ಸಂಘಟನೆ ಪ್ರಾರಂಭಿಸಿದ ಹೊಸ ಪರಿಕಲ್ಪನೆಯಾದ ಮಂದ್ ನಮ್ಮೆ ಕಾರ್ಯಕ್ರಮ, ಕೊಡವ ಅಕಾಡೆಮಿಯ ಕಾರ್ಯಕ್ರಮ, ಸ್ವಯಂ ಪ್ರೇರಿತವಾಗಿ ಜನತೆ ಈ ಬಗ್ಗೆ ಮರುಕಾಳಜಿ ತೋರಿದ್ದ ಕಾರಣದಿಂದಾಗಿ ಹಂತ ಹಂತವಾಗಿ ವರ್ಷದಿಂದ ವರ್ಷಕ್ಕೆ ಮಂದ್-ಮಾನಿಗಳ ಗತವೈಭವ ಮರುಕಳಿಸುತ್ತಾ ಬರುತ್ತಿದೆ. ಅದರಲ್ಲೂ ಪ್ರಸಕ್ತ ವರ್ಷ ಜಿಲ್ಲೆಯಾದ್ಯಂತ ಈ ಹಿಂದಿನ ವರ್ಷಗಳಿಗಿಂತ ಅಧಿಕ ವೈಭವ ಗೋಚರವಾಗುತ್ತಿದೆ. ಒಂದು ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ ಸುಮಾರು 150 ರಿಂದ 200 ರಷ್ಟು ಮಂದ್ಗಳು ಇವೆ. ಇದರಲ್ಲಿ ಸ್ಥಗಿತವಾದಂತಿದ್ದ ಕೆಲವು ಮಂದ್ಗಳ ಪೈಕಿ ಒಂದೆರಡು ವರ್ಷಗಳಿಂದ ಶೇ. 30ರಷ್ಟು ಮಂದ್ಗಳು ಮರುಜೀವ ಪಡೆದುಕೊಂಡಿದೆ ಎನ್ನಲಾಗಿದೆ.
ಪ್ರಸಕ್ತ ವರ್ಷವೂ ನಾಲ್ಕೇರಿಯಲ್ಲಿ ಸುಮಾರು 45 ವರ್ಷದಿಂದ ಹಾಗೂ ಬೈರಂಬಾಡದಲ್ಲಿ ಸುಮಾರು 35 ವರ್ಷದಿಂದ ಮುಚ್ಚಿ ಹೋಗಿದ್ದ ಮಂದ್ ಅನ್ನು ಮತ್ತೆ ಚಾಲನೆಗೆ ತರಲಾಗಿದೆ. ವಿಶೇಷವಾಗಿ ಯುವ ಸಮೂಹ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಆಶಾದಾಯಕವಾದ ಬೆಳವಣಿಗೆ ಎನ್ನುತ್ತಾರೆ ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು.
ಕೇರಿಮಂದ್, ಊರ್ಮಂದ್, ನಾಡ್ಮಂದ್, ಸೀಮೆಮಂದ್ ಎಂಬ ಪರಿಪಾಲನೆಯಲ್ಲಿ ಬಹುತೇಕ ಎಲ್ಲಾ ಗ್ರಾಮಗಳು ಒಂದಕ್ಕೊಂದು ಬೆಸೆದುಕೊಳ್ಳುತ್ತವೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಹೆಸರಾಗಿರುವ ಕೆಲವು ಮಂದ್ಗಳು ಇಂತಿವೆ. ಮಡಿಕೇರಿಯ ಕೋಟೆ ಆವರಣದಲ್ಲಿ ನಡೆಯುವ ಸಾಮೂಹಿಕ ಪುತ್ತರಿ ಕೋಲ್, ತಾಳೇರಿ ಮೂಂದ್ ನಾಡ್ ಮಂದ್, ಕೈಮುಡಿಕೆ ಆರಾಯಿರ ನಾಡ್ ಪೂಮಾಲೆ ಮಂದ್, ಭಾಗಮಂಡಲ ಪಟ್ಟಿಬಾಣೆ, ಕಡ್ಚಿಬಾಣೆ, ನಲ್ವತ್ತೊಕ್ಕಲು ಕಳ್ಳಿರಬಾಣೆ, ಮರೆನಾಡ್, ಹಳ್ಳಿಗಟ್ಟು ದೇವಮಕ್ಕಡ ಮಂದ್, ಕೈಕಾಡು ಚೋರಂಗೇಮಾನಿ, ಕಿರಗೂರು, ಮಾಯಮುಡಿ, ಮಹದೋಡದ ಪೂಮಚ್ಚಾಣೆ ಕೊಳಕೇರಿ, ಬೇಂಗ್ನಾಡ್, ಪೇರೂರು, ಅರಮೇರಿಯ ಆನೆಬೆಪ್ಪುನಾಡ್, ಮೈತಾಡಿ, ಬಿದ್ದಾಟಂಡ ವಾಡೆ, ಕುಂಜಿಲದ ಕೆಂಜಿಲಾಣೆ, ಅರುವತ್ತಿಕ್ಕಲು ಬಿಳಿಗೇರಿ, ಆರ್ಜಿಬೇಟೋಳಿ, ಮಕ್ಕಂದೂರುವಿನ ಉಮ್ಮೇಟಿ ಮಂದ್, ಕಡಗದಾಳುವಿನ ಕುರುಳಿ ಅಂಬಲ, ಅಮ್ಮತ್ತಿನಾಡ್, ಸೂರ್ಲಬ್ಬಿ ನಾಡ್, ಹೈಸೊಡ್ಲೂರುವಿನ ಪೈಯ್ಯಡ, ಕರಡದ ಬೇಲಿಯಾಣೆ, ಮಗ್ಗುಲದ ನಾಣಿಯಬಾಣೆ, ಹುದಿಕೇರಿಯ ಮಡಕೋಲ್ ಮಂದ್, ಮುತ್ತ್ನಾಡ್, ಕೈಕಾಡು ಈ ರೀತಿಯಾಗಿ ಜಿಲ್ಲೆಯ ವಿವಿಧ ಮಂದ್ಗಳಲ್ಲಿ ಪ್ರಸ್ತುತ ‘ಪೊಯಿಲೇ... ಪೊಯಿಲೇ...’ ಎಂಬ ವಿಶಿಷ್ಟವಾದ ಪುತ್ತರಿ ಕೋಲಾಟ್ ಸೇರಿದಂತೆ ವಿವಿಧ ಜನಪದ ಪ್ರದರ್ಶನಗಳು, ಕೊಂಬ್ಕೊಟ್ಟ್, ವಾಲಗದ ನಿನಾದ ಮಾರ್ದನಿಸುತ್ತಿದೆ. ಎಲ್ಲೆಡೆಗಳಲ್ಲಿ ಪುರುಷರು, ಮಹಿಳೆಯರು ಆಬಾಲವೃದ್ಧರಾಗಿ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ತೊಡಗಿಸಿಕೊಳ್ಳುತ್ತಿದ್ದಾರೆ.
-ಕಾಯಪಂಡ ಶಶಿ ಸೋಮಯ್ಯ