ಗೋಣಿಕೊಪ್ಪ ವರದಿ, ಡಿ. 5 : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಫೈಸೈಡ್ ರಿಂಕ್ ಹಾಕಿ ಪುರುಷರ ವಿಭಾಗದ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಶನಿವಾರದ ಪಂದ್ಯಗಳಲ್ಲಿ ಮಹಿಳಾ ವಿಭಾಗದ 5 ತಂಡಗಳು ಗೆಲವಿನ ನಗೆ ಬೀರಿದವು.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಪುರುಷರ ಫೈನಲ್ ಹಣಾಹಣಿ ನಡೆಯಲಿದೆ.
ಹಾಕಿ ಕರ್ನಾಟಕ, ಹಾಕಿ ಕೂರ್ಗ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸಹಯೋಗದಲ್ಲಿ ನಡೆದ ಪಂದ್ಯಗಳಲ್ಲಿ ಶನಿವಾರ ಪುರುಷರ 4 ತಂಡಗಳು ಸೆಮಿಗೆ ಪ್ರವೇಶ ಪಡೆದವು.
ಪುರುಷರ ಕ್ವಾರ್ಟರ್ ಫೈನಲ್ : ಪುರುಷರ ಕ್ವಾರ್ಟರ್ ಫೈನಲ್ನಲ್ಲಿ ಅತ್ತೂರು ಸ್ಪೋಟ್ರ್ಸ್ ಕ್ಲಬ್, ಬೊಟ್ಯತ್ನಾಡ್, ಯುಎಸ್ಸಿ ಬೇರಳಿನಾಡ್ ಹಾಗೂ ಎಸ್ಡಬ್ಲ್ಯೂಆರ್ ಹುಬ್ಬಳ್ಳಿ ತಂಡಗಳು ಸೆಮಿಗೆ ಪ್ರವೇಶ ಪಡೆದವು. ಅತ್ತೂರು ಸ್ಪೋಟ್ರ್ಸ್ ಕ್ಲಬ್ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಡಾಲ್ಫಿನ್ಸ್ ತಂಡವನ್ನು 4-3 ಗೋಲುಗಳ ರೋಚಕ ಗೆಲುವು ಪಡೆಯಿತು. ಡಾಲ್ಫಿನ್ಸ್ನ ಸೋಮಯ್ಯ 2, ಪ್ರತ್ವಿ, ಪ್ರಧಾನ್ ಸೋಮಣ್ಣ, ಎಚ್.ಆರ್.ಸಿ ತಂಡದ ಕುಮಾರನ್ 2, ಶಮಂತ್ ಗೋಲು ಹೊಡೆದರು.
ಬೊಟ್ಯತ್ನಾಡ್ ತಂಡವು ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವನ್ನು 5-4 ಗೋಲುಗಳಿಂದ ಮಣಿಸಿ ಸೆಮಿಗೆ ಪ್ರವೇಶ ಪಡೆಯಿತು. ಬೊಟ್ಯತ್ನಾಡ್ ತಂಡದ ರಂಜನ್ ಅಯ್ಯಪ್ಪ, ನಿತಿನ್ ತಿಮ್ಮಯ್ಯ 2, ಅಪ್ಪಚ್ಚು, ಪವಿನ್ ಪೊನ್ನಣ್ಣ ತಂಡದ ಬೋಪಣ್ಣ 2, ಚಿರಂತ್, ಅಜಿತ್ ಗೋಲು ಬಾರಿಸಿದರು.
ಯುಎಸ್ಸಿ ಬೇರಳಿನಾಡ್ ತಂಡವು ಪತ್ತಿರಿಯದ್ ತಂಡವನ್ನು 8-2 ಗೋಲುಗಳಿಂದ ಸೋಲಿಸಿತು. ಬೇರಳಿನಾಡ್ ತಂಡದ ರಾಹೀಲ್ 3, ಶೇಷಗೌಡ 2, ಆಭರಣ್ 2, ಶ್ರೀಧರ್, ಪತ್ತಿರಿಯದ್ ತಂಡದ ನಿಶಾಂತ್, ಶ್ರೀಜಲ್ ಗೋಲು ಹೊಡೆದರು.
ಎಸ್ಡಬ್ಲ್ಯೂಆರ್ ಹುಬ್ಬಳ್ಳಿ ತಂಡವು 9-0 ಗೋಲುಗಳಿಂದ ಎಚ್.ಆರ್.ಸಿ ತಂಡದ ವಿರುದ್ಧ ಜಯ ಗಳಿಸಿತು. ಹುಬ್ಬಳ್ಳಿ ತಂಡದ ರಾಹುಲ್ 3, ವಿನೀತ್ 2, ವೀರಣ್ಣ 2, ಆಂಜನೇಯ, ಸಂಜಯ್ ಗೋಲು ಹೊಡೆದರು.
ಪುರುಷರ ಲೀಗ್ ಫಲಿತಾಂಶ
ಹುಬ್ಬಳ್ಳಿ ಅಕಾಡೆಮಿ ತಂಡವು 2-1 ಗೋಲುಗಳಿಂದ ಅಂಜಿಕೇರಿ ತಂಡವನ್ನು ಮಣಿಸಿತು. ಹುಬ್ಬಳ್ಳಿ ತಂಡದ ಹರೀಶ್ 2, ಅಂಜಿಕೇರಿ ತಂಡದ ತಿಮ್ಮಯ್ಯ ಗೋಲು ಹೊಡೆದರು.
ಪವಿನ್ ಪೊನ್ನಣ್ಣ ಫೌಂಡೇಷನ್ ತಂಡ ವಾರಿಯರ್ಸ್ ವಿರುದ್ಧ 5-1 ಗೋಲುಗಳಿಂದ ಜಯಿಸಿತು. ವಿಜೇತ ತಂಡದ ಚಿರಂತ್ 2, ಸೋಮಣ್ಣ, ಅದ್ವಿತ್, ಭವಿನ್, ವಾರಿಯರ್ಸ್ನ ಮಯೂರ್ ಬೋಪಯ್ಯ ಗೋಲು ಹೊಡೆದರು.
ಅತ್ತೂರು ಸ್ಪೋಟ್ರ್ಸ್ ಕ್ಲಬ್ ತಂಡವು ಡೈನಮೈಟ್ಸ್ ವಿರುದ್ಧ 5-1 ಗೋಲುಗಳಿಂದ ಜಯ ಪಡೆಯಿತು. ಅತ್ತೂರು ತಂಡದ ಪ್ರತ್ವಿರಾಜ್ 3, ಪ್ರಧಾನ್, ಉಮೇಶ್, ಡೈನಮೈಟ್ಸ್ ತಂಡದ ಮಣಿ ಗೋಲು ಬಾರಿಸಿದರು.
ಡಾಲ್ಫಿನ್ಸ್ ತಂಡವು ಜೂಮರ್ಸ್ ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಡಾಲ್ಫಿನ್ಸ್ ತಂಡದ ಶಮಂತ್, ಕುಮಾರ್, ಅಶಿಕ್, ಜೂಮರ್ಸ್ ತಂಡದ ನಹಿಮುದ್ದೀನ್, ನವೀನ್ ನಾಚಪ್ಪ ಗೋಲು ಹೊಡೆದರು.
ಬೊಟ್ಯತ್ನಾಡ್ ತಂಡವು ಮಾರ್ನಿಂಗ್ ಬಾಯ್ಸ್ ತಂಡದ ವಿರುದ್ಧ 6-3 ಗೋಲುಗಳಿಂದ ಜಯ ಗಳಿಸಿತು. ಬೊಟ್ಯತ್ನಾಡ್ ತಂಡದ ನಿತಿನ್ ತಿಮ್ಮಯ್ಯ 3, ಪೂವಣ್ಣ, ರಂಜನ್ ಅಯ್ಯಪ್ಪ, ಅಯ್ಯಪ್ಪ, ಬಾಯ್ಸ್ ತಂಡದ ಅಚ್ಚಯ್ಯ, ಗ್ಯಾನ್, ಚೆಲ್ಸಿ ಗೋಲು ಹೊಡೆದರು.
ಯುಎಸ್ಸಿ ಬೇರಳಿನಾಡ್ ತಂಡವು ನೀಲಿಯತ್ ತಂಡವನ್ನು 6-3 ಗೋಲುಗಳಿಂದ ಮಣಿಸಿತು. ಬೇರಳಿನಾಡ್ ತಂಡದ ರಹೀನ್ 4, ಆಭರಣ್, ಶೇಷಗೌಡ, ನೀಲಿಯತ್ ತಂಡದ ರಾಯಲ್ ಅಯ್ಯಪ್ಪ, ಸುಗನ್, ಲೆಹರ್ ಗೋಲು ಹೊಡೆದು ಮಿಂಚಿದರು.
ಪತ್ತಿರಿಯದ್ ತಂಡವು ಅಮ್ಮತ್ತಿ ತಂಡವನ್ನು 4-2 ಗೋಲುಗಳಿಂದ ಪರಾಭವಗೊಳಿಸಿತು, ಪತ್ತಿರಿಯದ್ ತಂಡದ ಶ್ರೀಜಿಲ್ 2, ಸರಂಚ್, ಶ್ರೀರಾಗ್, ಅಮ್ಮತ್ತಿ ತಂಡದ ಗೌತಂ 2 ಗೋಲು ಹೊಡೆದರು.
ಮಹಿಳೆಯರ ಲೀಗ್ ಫಲಿತಾಂಶ
ಬ್ಲಿಜಡ್ರ್ಸ್ ತಂಡವು ಫೈರ್ ಹಾಕ್ ವಿರುದ್ಧ 4-2 ಗೋಲುಗಳಿಂದ ಗೆದ್ದು, 2 ನೇ ಗೆಲುವು ದಾಖಲಿಸಿತು. ಬ್ಲಿಜಡ್ರ್ಸ್ನ ಪವಿತ್ರ 2, ಹೇಮಾ, ಲೀಲಾವತಿ, ಹಾಕ್ಸ್ ತಂಡದ ಲಿಕಿತಾ. ಕೃತಿಕಾ ಗೋಲು ಹೊಡೆದರು.
ರಾಕರ್ಸ್ ತಂಡವು ವೈಪರ್ಸ್ ವಿರುದ್ಧ 4-3 ಗೋಲುಗಳ ಜಯ ಪಡೆಯಿತು. ವೈಪರ್ಸ್ ತಂಡದ ಜಾನ್ವಿ, ಅಂಜಲಿ, ಪೂಜಿತಾ, ಶಯ, ವೈಪರ್ಸ್ ತಂಡದ ನಿಶಾ 2, ಸಂಗೀತಾ ಗೋಲು ಹೊಡೆದರು.
ಬಂಬ್ಲ್ ಬೀ ತಂಡವು ಫೈರ್ ಆಂಟ್ಸ್ ತಂಡವನ್ನು 8-7 ಗೋಲುಗಳ ರೋಚಕವಾಗಿ ಮಣಿಸಿತು. ಬೀ ತಂಡದ ಶಿಲ್ಪ ಹಾಗೂ ದೇಚಮ್ಮ ತಲಾ 4 ಗೋಲು ಹೊಡೆದು ಮಿಂಚಿದರು. ಆಂಟ್ಸ್ ತಂಡದ ಚಂದನಾ 4, ನೇಹಾ 2, ಯಶಿಕಾ ಗೋಲು ಬಾರಿಸಿದರು.
ವೈಪರ್ಸ್ ತಂಡವು ಬ್ಲಿಜಡ್ರ್ಸ್ ವಿರುದ್ಧ 4-3 ಗೋಲುಗಳ ರೋಚಕ ಗೆಲುವು ಪಡೆಯಿತು. ವೈಪರ್ಸ್ ತಂಡದ ರಮ್ಯ 2, ವಿದ್ಯಾ, ನಿಶಾ, ಬ್ಲಿಜಡ್ರ್ಸ್ನ ಹೇಮಾ, ಪವಿತ್ರ, ಚಂದನ ಗೋಲು ಹೊಡೆದರು.
ಫೈರ್ ಆಂಟ್ಸ್ ತಂಡವು ಫೈರ್ ಹಾಕ್ಸ್ ತಂಡವನ್ನು 4-3 ಗೋಲುಗಳಿಂದ ಮಣಿಸಿತು. ಫೈರ್ ಆಂಟ್ಸ್ ತಂಡದ ಚಂದನ 2, ಸೌಮ್ಯ, ಯಶಿಕಾ, ಫೈರ್ ಹಾಕ್ಸ್ ತಂಡದ ಅಧಿರಾ 2, ಕೃತಿಕಾ ಗೋಲು ಬಾರಿಸಿದರು.
ಬಂಬಲ್ ಬೀ ಹಾಗೂ ರಾಕರ್ಸ್ ತಂಡಗಳ ನಡುವಿನ ಪಂದ್ಯ 5-5 ಗೋಲುಗಳ ರೋಚಕ ಡ್ರಾದಲ್ಲಿ ಕೊನೆಗೊಂಡಿತು. ಬೀ ತಂಡದ ಪೂಜಾ 3, ದೇಚಮ್ಮ 2, ರಾಕರ್ಸ್ನ ಪೂಜಿತಾ 3, ಅಂಜಲಿ, ಜೀವಿತಾ ಗೋಲು ಹೊಡೆದು, ಸೋಲಿನಿಂದ ತಪ್ಪಿಸಿಕೊಂಡರು.