ನಾಪೆÇೀಕ್ಲು, ಡಿ. 5: ಬಲಮುರಿ ಗ್ರಾಮದ ನೆಬ್ಬೂರು ಗೌಡ ಸಂಘದ ವತಿಯಿಂದ ಸನ್ಮಾನ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅರೆಭಾಷೆ ಅಕಾಡೆಮಿಯ ಉದ್ಘೋಷಕರಾದ ಕಡ್ಲೇರ ತುಳಸಿ ಮೋಹನ್, ಆರೋಗ್ಯ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ನಿವೃತ್ತರಾದ ಕೊಟ್ಟಕೇರಿಯನ ಘನಾವತಿ, ವಿಮಾ ಕಂಪೆನಿಯಿಂದ ನಿವೃತ್ತರಾದ ಕಟ್ರತನ ತಾರಾ ಪ್ರಸಾದ್, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೊಟ್ಟಕೇರಿಯನ ಧರ್ಮೇಂದ್ರ, ಎಂ.ಟೆಕ್ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಕೊಟ್ಟಕೇರಿಯನ ಪೂಜಾ ಅವರನ್ನು ಸನ್ಮಾನಿಸಲಾಯಿತು.