ಸೋಮವಾರಪೇಟೆ, ಡಿ. 4: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 81.17ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಹೇಳಿದರು.

ಗೌಡಳ್ಳಿ ಬಿಜಿಎಸ್ ಶಾಲಾ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19 ಸೋಂಕು ಹಿನ್ನೆಲೆ ರೈತಾಪಿ ವರ್ಗ ಸೇರಿದಂತೆ ಎಲ್ಲರೂ ಸಂಕಷ್ಟದಲ್ಲಿದ್ದು, ಸದಸ್ಯರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸಹಕಾರ ಸಂಘ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಸಂಘ 81.17 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಈ ಬಾರಿ ಶೇ. 25ರ ಡಿವಿಡೆಂಟ್ ನೀಡಲಾಗುವುದು. ಸಂಘದಲ್ಲಿ 2228 ಸದಸ್ಯರಿದ್ದು, 2.13 ಕೋಟಿ ರೂ.ಗಳ ಪಾಲು ಬಂಡವಾಳವಿದೆ. 9.43 ಕೋಟಿ ರೂ.ಗಳಷ್ಟು ಠೇವಣಿ ಸಂಗ್ರಹಿಸಲಾಗಿದೆ. 32 ಕೋಟಿ ರೂ.ಗಳಷ್ಟು ಸದಸ್ಯರಿಗೆ ಸಾಲ ವಿತರಿಸಲಾಗಿದೆ.

ಆಭರಣ ಮೇಲಿನ ಸಾಲಕ್ಕೆ ಶೇ. 9 ಮತ್ತು 10 ರಷ್ಟು ಬಡ್ಡಿ, ಜಾಮೀನು ಸಾಲಕ್ಕೆ ಶೇ.13, ಸ್ವಸಹಾಯ ಸಂಘದ ಸಾಲಕ್ಕೆ ಶೇ.12ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಎಸ್. ಪರಮೇಶ್, ನಿರ್ದೇಶಕರುಗಳಾದ ಎಸ್.ಬಿ. ಭರತ್ 32 ಕೋಟಿ ರೂ.ಗಳಷ್ಟು ಸದಸ್ಯರಿಗೆ ಸಾಲ ವಿತರಿಸಲಾಗಿದೆ.

ಆಭರಣ ಮೇಲಿನ ಸಾಲಕ್ಕೆ ಶೇ. 9 ಮತ್ತು 10 ರಷ್ಟು ಬಡ್ಡಿ, ಜಾಮೀನು ಸಾಲಕ್ಕೆ ಶೇ.13, ಸ್ವಸಹಾಯ ಸಂಘದ ಸಾಲಕ್ಕೆ ಶೇ.12ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಎಸ್. ಪರಮೇಶ್, ನಿರ್ದೇಶಕರುಗಳಾದ ಎಸ್.ಬಿ. ಭರತ್ ಕುಮಾರ್, ವಿ.ಎನ್. ನಾಗರಾಜ್, ಜಿ.ಪಿ. ಸುನೀಲ್‍ಕುಮಾರ್, ಕೆ.ಜಿ. ದಿನೇಶ್, ಸಿ.ಈ. ವೆಂಕಟೇಶ್, ಜಿ.ಈ. ಸುರೇಶ್, ಸಿ.ಎ. ಮಮತ, ಹೆಚ್.ಎಸ್. ಪುಷ್ಪಾ, ಡಿ.ಪಿ. ಸುಮಿತ್ರ, ಟಿ.ಎಸ್. ವಾಣಿ, ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರಾದ ಟಿ.ಆರ್. ಪವನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೆ. ಶಿವಪ್ರಕಾಶ್, ಲೆಕ್ಕಿಗ ಜೆ.ಕೆ. ಪೊನ್ನಪ್ಪ, ಸಿಬ್ಬಂದಿಗಳಾದ ಎಂ.ಹೆಚ್. ಕಿರಣ್, ಜಿ.ಆರ್. ದಿವಾಕರ ಉಪಸ್ಥಿತರಿದ್ದರು.