ಕೂಡಿಗೆ, ಡಿ. 5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಎದುರು ನಿಲ್ಲಿಸಿದ್ದ ಬೈಕ್‍ವೊಂದನ್ನು ಕದ್ದು ಕೆ.ಆರ್. ನಗರದಲ್ಲಿ ಮಾರಾಟ ಮಾಡುತ್ತಿದ್ದ ಸುಳಿವಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೆÇಲೀಸರು ಆರೋಪಿಯನ್ನು ಬೈಕ್ ಸಹಿತ ಬಂಧಿಸಿದ್ದಾರೆ. ಕಣಿವೆ ಸಮೀಪ ಹುಲುಸೆ ಗ್ರಾಮದ ಪವನ್ ಬಂಧಿತ ಆರೋಪಿ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿ ಇದ್ದರು.