ವೀರಾಜಪೇಟೆ, ಡಿ. 5: ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಮಾಳ ಪೈಸಾರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪರಿಶಿಷ್ಟ ವರ್ಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪರಿಶಿಷ್ಟ ವರ್ಗದವರ ಪರ ಸಂಘಟನೆಗಳ ಐಕ್ಯ ಒಕ್ಕೂಟದ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸಂಜೀವ್‍ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಶೇ. 40 ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರಿದ್ದಾರೆ. ಶೇ. 97 ಜನರು ಕೂಲಿ ಕಾರ್ಮಿಕರು. ಇವರೆಲ್ಲ ವಾಸ ಮಾಡಲು ಸರಿಯಾದ ಸೂರಿಲ್ಲ. ಆದಿವಾಸಿಗಳು ಅರಣ್ಯದೊಳಗೆ ಮನೆ ಕಟ್ಟಿಕೊಂಡಿದ್ದಾರೆ. ಅದೇ ರೀತಿ ಉಳಿದವರು ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. 45 ವರ್ಷಗಳಿಂದ ಇಲ್ಲಿನ ಪೈಸಾರಿ ಜಾಗದಲ್ಲಿ ವಾಸವಿರುವ 48 ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಕ್ಕೆ ಹಕ್ಕುಪತ್ರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದಿವಾಕರ್, ಬೆಳ್ಳುರು ಕೃಷ್ಣಪ್ಪ, ಪರಶುರಾಮ್, ವೀರಭದ್ರಯ್ಯ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.ಸಂಚಾಲಕ ದಿವಾಕರ್, ಬೆಳ್ಳುರು ಕೃಷ್ಣಪ್ಪ, ಪರಶುರಾಮ್, ವೀರಭದ್ರಯ್ಯ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.