ಗೋಣಿಕೊಪ್ಪ ವರದಿ, ಡಿ. 4: ಪುತ್ತರಿ ಹಬ್ಬವನ್ನು ದಕ್ಷಿಣ ಕೊಡಗಿನ ಭಾಗದಲ್ಲಿ ಸೋಮವಾರ ಆಚರಿಸಲಾಯಿತು. ಹಗಲು ಹೊತ್ತು ಕದಿರು ತೆಗೆಯುವವರು ಗ್ರಾಮದ ದೇವಸ್ಥಾನ, ಗದ್ದೆಗಳಲ್ಲಿ ಕದಿರು ತೆಗೆದು ಸಂಭ್ರಮಿಸಿದರು.

ಮುಗುಟಗೇರಿ ತೋಣಕೇರಿ ಭಗವತಿ ದೇವರಿಗೆ ದೇವಕದ್ ಅನ್ನು ಅಲ್ಲಿನ ಮುದ್ದಿಯಡ ಗಣೇಶ್ ಸೋಮಯ್ಯ ಅವರ ಗದ್ದೆಯಲ್ಲಿ ತೆಗೆಯಲಾಯಿತು. ಗ್ರಾಮಸ್ಥರು ಪಾಲ್ಗೊಂಡಿದ್ದರು. ನಿಟ್ಟೂರು-ಕಾರ್ಮಾಡು ಕಾಲಭೈರವ ದೇವಸ್ಥಾನದಲ್ಲಿ ಬೆಳಿಗ್ಗೆ ಕದಿರು ತೆಗೆಯಲಾಯಿತು ದುಡಿಕೊಟ್ಟ್ ಹಾಡಿನೊಂದಿಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿ ಕೊಳ್ಳಲಾಯಿತು.

ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮೇಚಂಡ ವಾಸು ಸೋಮಯ್ಯ, ಉಪಾಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಕಾರ್ಯದರ್ಶಿ ಕೊಟ್ಟಂಗಡ ಮಂಜುನಾಥ, ನಿರ್ದೇಶಕರಾದ ಪಡಿಞರಂಡ ಪ್ರಭುಕುಮಾರ್, ಹೊಟ್ಟೇಂಗಡ ಅಜಿತ್, ಕಳ್ಳೇಂಗಡ ಉತ್ತಯ್ಯ, ವಿ.ಎಸ್. ಸೂರ, ಚೀರಂಡ ಸುಬ್ರಮಣಿ ಗ್ರಾಮಸ್ಥರು ಪಾಲ್ಗೊಂಡಿದ್ದರು.