ಶನಿವಾರಸಂತೆ, ಡಿ. 5: ಸಮೀಪದ ಕೊಡ್ಲಿಪೇಟೆ ಹೋಬಳಿಯ ನಾಡ ಕಚೇರಿಯಲ್ಲಿ ನಡೆದ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಉಪತಹಶೀಲ್ದಾರ್ ಪುರುಷೋತ್ತಮ್ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ಜನಸಾಮಾನ್ಯರಿಗೆ ತ್ವರಿತವಾಗಿ ಸರಕಾರಿ ಸೇವೆಗಳು ಲಭ್ಯವಾಗಲು ಸರಕಾರ ಸಕಾಲ ಸಪ್ತಾಹ ಕಾರ್ಯಕ್ರಮ ಜಾರಿಗೊಳಿಸಿದೆ. ಇದು ವಿಸ್ತರಣೆಗೊಂಡಿದ್ದು, 98 ಇಲಾಖೆಯ 1025 ಸೇವೆಗಳು ಲಭ್ಯವಿದೆ. ನಾಗರಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಗ್ರಾಮ ಲೆಕ್ಕಾಧಿಕಾರಿಗಳಾದ ಚೈತ್ರಾ, ಶ್ವೇತಾಶ್ರೀ, ಪ್ರಕೃತಿ, ವಿದ್ಯಾ, ಗ್ರಾಮ ಸಹಾಯಕರಾದ ರಾಜು, ಲೋಹಿತ್, ಭೀಮೇಶ್, ಮಹೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.