ಕುಶಾಲನಗರ, ಡಿ. 5: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆ ಗಳು ಶನಿವಾರ ಕರೆ ನೀಡಿದ ಬಂದ್ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಘಟಕದ ಅಧ್ಯಕ್ಷ ವೆಂಕಟೇಶ ಪೂಜಾರಿ ನೇತೃತ್ವದಲ್ಲಿ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ತಾಲೂಕು ಘಟಕದ ಅಧ್ಯಕ್ಷ ದೀಪಕ್, ಕರವೇ ಗೌರವಾಧ್ಯಕ್ಷ ಬಿ.ಎ.ನಾಗೇಗೌಡ, ಜಿಲ್ಲಾ ಖಜಾಂಜಿ ಹರೀಶ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾಲಿಂಗಪ್ಪ, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಗೋಪಾಲ್, ಕಾರ್ಯದರ್ಶಿ ವೇದಕುಮಾರ್, ಮುಖಂಡರಾದ ಉದಯ, ದೇವೇಂದ್ರ, ಕಮಲ್, ರೋಷನ್, ರಂಗಸ್ವಾಮಿ, ರವಿಚಂದ್ರ, ಸರಳಾ ರಾಮಣ್ಣ, ಶಾಜಿ, ಪಾಷ ಪಾಲ್ಗೊಂಡಿ ದ್ದರು. ಈ ಪ್ರತಿಭಟನೆ ಹೊರತುಪಡಿಸಿ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಸಂಬಂಧ ಯಾವುದೇ ಸ್ಪಂದನೆ ಇರಲಿಲ್ಲ.