ಮಡಿಕೇರಿ, ಡಿ. 3: ‘ವಾಕ್ ಮತ್ತು ಶ್ರವಣ- ಜೀವಿತಾವಧಿಯಲ್ಲಿ ಸ್ವತ್ತುಗಳು’ ಎಂಬ ಘೋಷವಾಕ್ಯದೊಂದಿಗೆ ಭಾರತೀಯ ವಾಕ್ ಮತ್ತು ಶ್ರವಣ ಸಂಘ (Iಟಿಜiಚಿಟಿ Sಠಿeeಛಿh ಚಿಟಿಜ ಊeಚಿಡಿiಟಿg ಂssoಛಿiಚಿಣioಟಿ - ISಊಂ) ತಾ. 1 ರಿಂದ ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿದ್ದು, ತಾ. 15ರ ವರೆಗೆ ಅರಿವು ಮೂಡಿಸಲಾಗುವುದು ಎಂದು ಆಡಿಯಾಲಜಿಸ್ಟ್ ಮುಂಡೋಟಿರ ಅಚ್ಚಯ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಾಕ್ ಮತ್ತು ಶ್ರವಣ ಸಮಸ್ಯೆಗಳ ಕುರಿತು ಜಾಗೃತಿಯನ್ನು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರು ಸಂವಹನ ಅಸ್ವಸ್ಥತೆ ಹೊಂದಿರುವವರ ಅಗತ್ಯಗಳನ್ನು ಪೂರೈಸಲಿದ್ದಾರೆ.

ವರ್ಚುವಲ್ ಪ್ಯಾನಲ್ ಚರ್ಚೆ ನಡೆಸುವ ಮೂಲಕ ವಾಕ್ ಮತ್ತು ಶ್ರವಣ ಸಮಸ್ಯೆಗಳ ವಿವಿಧ ಅಂಶಗಳ ಬಗ್ಗೆ ಜಾಗೃತಿ ಮೂಡಿಸಲು ಇಶಾ ಸಂಸ್ಥೆ ಬಯಸಿದೆ. ರಾಷ್ಟ್ರವ್ಯಾಪಿ ಚರ್ಚಾ ಕಾರ್ಯಕ್ರಮ ನಡೆಯಲಿದೆ.

ಸಾರ್ವಜನಿಕ ಶಿಕ್ಷಣವನ್ನು ಗುರಿಯಾಗಿರಿಸಿಕೊಂಡು ಶ್ರವಣ ನಷ್ಟ, ಪಾಶ್ರ್ವವಾಯು, ನುಂಗುವ ತೊಂದರೆ, ಟಿನ್ನಿಟಸ್, ಶ್ರವಣ ಸಾಧನಗಳು, ಕೋಕ್ಲರ್ ಇಂಪ್ಲಾಂಟ್, ತೊದಲುವಿಕೆ ಹಾಗೂ ಇತರ ವಾಕ್ ಮತ್ತು ಶ್ರವಣ ಸಮಸ್ಯೆಗಳ ಬಗ್ಗೆ ವರ್ಚುವಲ್ ಪ್ಯಾನಲ್ ಚರ್ಚೆಗಳು ನಡೆಯಲಿವೆ.

ಯೂಟ್ಯೂಬ್ ಮತ್ತು ಜೂಮ್ ಆ್ಯಪ್ ಲಿಂಕ್ ಮೂಲಕ ತಾ. 15 ರವರೆಗೆ ಸಂಜೆ 7 ರಿಂದ 9 ಗಂಟೆಯವರೆಗೆ ಚರ್ಚೆ ನಡೆಸಲಾಗುತ್ತದೆ. ಆಸಕ್ತರು ಜೂಮ್ ಆ್ಯಪ್ ಲಿಂಕ್ hಣಣಠಿs://zoom.us/ರಿ/97848354406? ಠಿತಿಜ=ಗಿಆಃರಿbಉ8ಥಿಓಟಿಃUಜರಿZರಿಖಿಗಿಠಿUಗಿUಒ ತಿಛಿಇ5ಘಿಜz09, ಯೂಟ್ಯೂಬ್, ಐಶಾ ವಾರ್ಷಿಕಗಳು ಅಥವಾ hಣಣಠಿs://biಣ.ಟಥಿ/365iಚಿಣm ಲಿಂಕ್ ಬಳಸಬಹುದು. ಅಥವಾ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 8867625286 ನ್ನು ಸಂಪರ್ಕಿಸಬಹುದು ಎಂದು ಅಚ್ಚಯ್ಯ ಹೇಳಿದ್ದಾರೆ.