ಮಡಿಕೇರಿ, ಡಿ. 3: ಭಾರತೀಯ ಸೇನೆಗೆ ಸೇರ್ಪಡೆಗೊಂಡು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ‘ಸ್ವೋರ್ಡ್ ಆಫ್ ಹಾನರ್’ ಸಹಿತವಾಗಿ ರಾಷ್ಟ್ರಪತಿಗಳ ಚಿನ್ನದ ಪದಕ ಗಳಿಸಿ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡ ಚೋಳಂಡ ವರುಣ್ ಗಣಪತಿ ಅವರನ್ನು ಮಡಿಕೇರಿ ಕೊಡವ ಸಮಾಜದ ಮೂಲಕ ಸನ್ಮಾನಿಸಲಾಯಿತು.
ಕೊಡವ ಸಮಾಜ ಮಂದ್‍ನಲ್ಲಿ ನಡೆದ ಪುತ್ತರಿ ಈಡ್ ಕಾರ್ಯಕ್ರಮದ ಸಂದರ್ಭ ಇವರನ್ನು ಸಮಾಜದ ಪರವಾಗಿ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಹಾಗೂ ಆಡಳಿತ ಮಂಡಳಿಯವರು ‘ಮಂಡೆತುಣಿ’ ಹಾಕುವ ಮೂಲಕ ಗೌರವಿಸಿದರು.
ಈ ಸಂದರ್ಭ ವರುಣ್ ಅವರ ತಂದೆ ಲೋಕಾಯುಕ್ತ ಎಸ್ಪಿಯಾಗಿರುವ ಚೋಳಂಡ ಪೂವಯ್ಯ, ತಾಯಿ ಧರಣಿ ಹಾಗೂ ಬಂಧುಗಳು ಪಾಲ್ಗೊಂಡಿದ್ದರು.