ಸುಂಟಿಕೊಪ್ಪ, ಡಿ. 3: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರೂ. 33,43,673 ಲಾಭಗಳಿಸಿ ‘ಎ’ ತರಗತಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಬಿಜ್ಜಂಡ ಎ. ಮೊಣ್ಣಪ್ಪ ತಿಳಿಸಿದರು.

ಸಂಘದ 2019-2020ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು ಆಧುನೀಕರಣ ಗೊಳಿಸಿದ್ದು, ಸಂಪೂರ್ಣ ಕಂಪ್ಯೂಟರಿ ಕರಣದಲ್ಲಿ ವ್ಯವಹಾರ ನಡೆಯಲಿರುವು ದರಿಂದ ಸದಸ್ಯರುಗಳು ಪಡೆದ ಸಾಲವನ್ನು ನಗದು ರೂಪದಲ್ಲಿ ಸಲ್ಲಿಸಿ ಸಹಕರಿಸಬೇಕು, ಇಂಟರ್‍ಲಾಕ್ ಅಳವಡಿಸಲಾಗಿದೆ. ಸಂಘದ ಖಾಲಿ ಜಾಗದಲ್ಲಿ ಗೋದಾಮು ಕಟ್ಟಡ ನಿರ್ಮಿಸಲಾಗುವುದು. ಗೊಬ್ಬರ, ಕ್ರಿಮಿನಾಶಕ ಸಿಮೆಂಟ್, ಕೃಷಿ ಉಪಕರ ಣಗಳನ್ನು ರೈತರು ಸಂಘದಿಂದ ಪಡೆದುಕೊಂಡು ಸಂಘದ ಏಳಿಗೆಗೆ ಸಹಕರಿಸಬೇಕೆಂದು ಅಧ್ಯಕ್ಷರು ಹೇಳಿದರು.

ಗೊಬ್ಬರ ಸಾಲವನ್ನು ಶೇ. 10 ಬಡ್ಡಿ ದರದಲ್ಲಿ ವಿತರಿಸುವ ಬದಲು ಶೇ. 8 ರ ಬಡ್ಡಿದರದಲ್ಲಿ ಸದಸ್ಯರಿಗೆ ನೀಡಬೇಕೆಂದು ಮಂದೆಯಂಡ, ಗಣೇಶ, ಪೊಡನೋಳಂಡ ಮೋಹನ್, ಪಿ.ಎಸ್. ರತೀಶ ಆಗ್ರಹಿಸಿದರು. ಆಭರಣ ಸಾಲದ ಬಡ್ಡಿ ಶೇಕಡ 10 ರಿಂದ 9ಕ್ಕೆ ಇಳಿಸಲಾಗಿದೆ. ಕೃಷಿಯೇತರ ಸಾಲವನ್ನು ಸದಸ್ಯರಿಗೆ ಶೇ. 10 ಬಡ್ಡಿ ದರದಲ್ಲಿ ನೀಡ ಲಾಗುತ್ತಿದೆ. ಬೈಲಾ ತಿದ್ದುಪಡಿಯಂತೆ ಜಾಮೀನು ಸಾಲವನ್ನು 20,000 ರೂ ನಿಂದ 50,000 ರೂ.ವರೆಗೆ ಹೆಚ್ಚಸಲು ತಿರ್ಮಾನಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎಸ್. ಕಾವೇರಪ್ಪ ಸಭೆಗೆ ತಿಳಿಸಿದರು.

ವಾಹನ ಸಾಲದ ಬಡ್ಡಿ ಶೇ. 10 ರಷ್ಟು ಇರುವುದನ್ನು ಇಳಿಸಬೇಕು ಎಂದು ಎಂ.ಪಿ. ಮನು ಮೇದಪ್ಪ ಆಗ್ರಹಿಸಿದರು. ಆಭರಣ ಲಾಕರ್‍ನಲ್ಲಿ ಭದ್ರತೆ ಹೆಚ್ಚಿಸಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮಂದೆಯಂಡ ಗಣೇಶ ಹೇಳಿದರು.

ವೇತನ ಸಾಲ ನೀಡುವಾಗ ಎಚ್ಚರ ವಹಿಸಬೇಕು, ವೇತನದ ದೃಢೀಕರಣ ದಾಖಲೆ ಅಧಿಕಾರಿಗಳು ಇತ್ತೀಚೆಗೆ ನೀಡುವಂತಿಲ್ಲ ಎಂದು ಹೇಳಿದರು.

ಸಂಘದ ಬೆಳವಣಿಗೆಗೆ ಜಾಗ ಖರೀದಿಸುವ ಉದ್ದೇಶವಿದ್ದು, ಅದರಿಂದ ವ್ಯಾಪಾರ ವಹಿವಾಟು ಅಭಿವೃದ್ಧಿಪಡಿಸಲಾಗುವುದು. ಜಾಗ ಇದ್ದರೆ ತಿಳಿಸಿ ಎಂದು ಸದಸ್ಯರುಗಳ ಎಲ್ಲ ಪ್ರಶ್ನೆಗಳಿಗೆ ಸಿಇಓ ಕಾವೇರಪ್ಪ ವಿವರಣೆ ನೀಡಿದರು.

ಮಾದಾಪುರ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪಿ.ಪಿ. ತಿಲಕ್ ಕುಮಾರ್ ಹಾಗೂ ನಾಪಂಡ ಉಮೇಶ್ ಉತ್ತಪ್ಪ ಕ್ರಮವಾಗಿ ಕುಶಾಲನಗರ ಎಪಿಎಂಸಿ ನಿರ್ದೇಶಕರೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕ ರಾಗಿ ಆಯ್ಕೆಯಾಗಿದ್ದು, ಸಂಘದ ವತಿಯಿಂದ ಸನ್ಮಾನಿಸಲಾಯಿತು.

10ನೇ ತರಗತಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಘದ ಸದಸ್ಯರುಗಳ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣಗೊಂಡ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ನಿರ್ದೇಶಕರುಗಳಾದ ಸಿ.ಎ. ತಮ್ಮಯ್ಯ, ಎನ್.ಸಿ. ಕಾಳಪ್ಪ, ಎನ್.ಎಸ್. ಬೆಳ್ಯಪ್ಪ, ಬಿ.ಎ. ಧೂಮಪ್ಪ, ಕೆ.ಎ. ಲತೀಫ್, ಪಿ.ಇ. ನಳಿನಿ ತಮ್ಮಯ್ಯ, ಎಂ.ಸಿ. ಪೊನ್ನವ್ವ, ಜೆ.ಆರ್. ಕೃಷ್ಣ, ರೇಣುಕಮ್ಮ, ಎಂ.ವೈ. ಕೇಶವ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್ ಉಪಸ್ಥಿತರಿದ್ದರು.