ಕುಶಾಲನಗರ, ಡಿ. 3: ಕುಶಾಲನಗರ ಗಣಪತಿ ದೇವಾಲಯ 100ನೇ ವರ್ಷದ ರಥೋತ್ಸವ ಹಿನ್ನೆಲೆ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಫಲ ತಾಂಬೂಲಗಳೊಂದಿಗೆ ದೇವಾಲಯಕ್ಕೆ ಆಗಮಿಸಿದ ಪಟ್ಟಣದ 10ಕ್ಕೂ ಅಧಿಕ ದೇವಾಲಯಗಳ ಪ್ರತಿನಿಧಿಗಳು ನಾಡಿನ ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ನೇತೃತ್ವದಲ್ಲಿ ರಾಘವೇಂದ್ರ ಭಟ್ ಮತ್ತು ತಂಡದ ಸದಸ್ಯರು ವಿಶೇಷ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಪ್ರತಿ ವರ್ಷದಂತೆ ಜಾತ್ರಾ ಸಂದರ್ಭ ನಡೆಯಬೇಕಾಗಿದ್ದ ಗೋಪ್ರದರ್ಶನ, ಜಾತ್ರಾ ಮಳಿಗೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೋವಿಡ್ ಮಾರ್ಗ ಸೂಚಿಯಂತೆ ರದ್ದುಗೊಳಿಸಲಾಗಿದೆ. ಈ ಬಾರಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಥೋತ್ಸವ ಸಾಂಕೇತಿಕವಾಗಿ ನಡೆಯಲಿದ್ದು ಭಕ್ತಾದಿಗಳು ಸಹಕರಿಸಬೇಕು ಎಂದು ಕೋರಿದರು.
ದೇವಾಲಯದ ವಾರ್ಷಿಕ ರಥೋತ್ಸವ ಮತ್ತು ಉತ್ಸವಗಳ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.
ಗಣಪತಿ ದೇವಾಲಯ ಆಡಳಿತ ಸಮಿತಿಯ ಡಿ.ಅಪ್ಪಣ್ಣ, ವಿ.ಡಿ. ಪುಂಡರೀಕಾಕ್ಷ, ದೇವಾಲಯ ಒಕ್ಕೂಟ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್, ಗೌರವಾಧ್ಯಕ್ಷ ಕೆ.ಆರ್. ಶಿವಾನಂದ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಉಪಾಧ್ಯಕ್ಷ ರಾಮದಾಸ್, ಖಜಾಂಚಿ ಎಸ್.ಕೆ. ಶ್ರೀನಿವಾಸರಾವ್, ವಿವಿಧ ದೇವಾಲಯ ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.