ಗುಡ್ಡೆಹೊಸೂರು, ಡಿ. 2: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ 2019-20ನೇ ಸಾಲಿನಲ್ಲಿ ರೂ. 33.10 ಲಕ್ಷ ಲಾಭಗಳಿಸಿದೆ. ಸಂಘದ ವ್ಯಾಪ್ತಿಗೆ ಒಟ್ಟು 9 ಗ್ರಾಮಗಳು ಸೇರಿದ್ದು, 2166 ಸದಸ್ಯರನ್ನು ಹೊಂದಿದೆ. ಪಾಲು ಬಂಡವಾಳ ರೂ. 197.86 ಲಕ್ಷ ಇದ್ದು, 2019-20ನೇ ಸಾಲಿನಲ್ಲಿ ರೂ. 130.35 ಕೋಟಿ ವಹಿವಾಟು ನಡೆಸಿರುವ ಸಂಘ ರೂ. 98.88 ಲಕ್ಷ ಕ್ಷೇಮ ನಿಧಿಯನ್ನು ಮತ್ತು ರೂ. 177.76 ಲಕ್ಷ ಇತರ ನಿಧಿಯನ್ನು ಹೊಂದಿರುತ್ತದೆ. ಸಂಘದಿಂದ ವಿವಿಧ ರೀತಿಯ ಸಾಲವನ್ನು ಸದಸ್ಯರಿಗೆ ನೀಡುತ್ತಿದ್ದು, 2019-20ನೇ ಸಾಲಿಗೆ ರೂ. 997.86 ಲಕ್ಷಗಳ ಕೆ.ಸಿ.ಸಿ. ಸಾಲ ಮತ್ತು ರೂ. 207.09 ಲಕ್ಷಗಳ ಮಧ್ಯಮಾವಧಿ ಸಾಲ, ರೂ. 390.65 ಲಕ್ಷ ಜಾಮಿನು ಸಾಲ ರೂ. 36.77 ಲಕ್ಷಗಳ ವಾಹನ ಸಾಲ ನೀಡಲಾಗಿದೆ.

ಸಂಘವು ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮದಲ್ಲಿ ದಿನಸಿ ಶಾಖೆಗಳನ್ನು ಹೊಂದಿದ್ದು ಶಾಖೆಗಳ ಮೂಲಕ ರಸಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ವಸ್ತುಗಳು ಹತ್ಯಾರು, ಸಿಮೆಂಟ್, ಕೊಂಕಣ ಗ್ಯಾಸ್, ಮದ್ದುಗುಂಡು ಗಳನ್ನು ಮಾರುತ್ತಿದ್ದು, 2019-20ನೇ ಸಾಲಿನಲ್ಲಿ ರೂ. 561.31 ಲಕ್ಷ ವ್ಯಾಪಾರ ವಹಿವಾಟು ನಡೆಸಿ ರೂ. 26.71 ಲಕ್ಷ ಲಾಭಗಳಿಸಿದೆ. ಅಲ್ಲದೆ ಬ್ಯಾಂಕಿನ ಮೂರು ಶಾಖೆಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಯುತ್ತಿದೆ. ವಾಲ್ನೂರಿನ ಶಾಖೆಯಲ್ಲಿ ಸಹಕಾರಭವನ ನಿರ್ಮಿಸಿದ್ದು, ಸಾರ್ವಜನಿಕ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಸಂಘವು ಎರಡು ಟ್ರ್ಯಾಕ್ಟರ್ ಮತ್ತು ಒಂದು ಮಿನಿ ಲಾರಿಯನ್ನು ಹೊಂದಿದೆ. ಸಂಘದ ವತಿಯಿಂದ 2 ರೈತ ಕೂಟ ಮತ್ತು ಜಂಟಿ ಭಾದ್ಯ ಗುಂಪನ್ನು ರಚಿಸಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಸಂಘದ ವ್ಯಾಪ್ತಿಗೆ ಒಳಪಡುವ 7 ಮತ್ತು 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪ್ರತಿ ಶಾಲೆಯ 3 ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಗುತ್ತಿದೆ. ಮುಂದಿನ ಸಾಲಿನಲ್ಲಿ ಸಂಘಕ್ಕೆ ನೂತನ ವಾಗಿ ರೂ. 5 ಕೋಟಿ ವೆಚ್ಚ ದಲ್ಲಿ ಕಚೇರಿ ಮತ್ತು ಗೋದಾಮು ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 2019-20ನೇ ಸಾಲಿನ ಮಹಾ ಸಭೆಯು ಅಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ, ಎಂದು ಸಂಘದ ಅಧ್ಯಕ್ಷ ಮುರಳಿ ಮಾದಯ್ಯ ತಿಳಿಸಿದ್ದಾರೆ. ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಆಡಳಿತ ಮಂಡಳಿ ಸಭೆ ನಡೆಯಿತು. ಸದಸ್ಯರ ಪಾಲು ಹಣಕ್ಕೆ ಶೇ. 10 ಡಿವಿಡೆಂಟ್ ನೀಡಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ವಾರ್ಷಿಕ ಮಹಾಸಭೆ ತಾ. 3 ರಂದು (ಇಂದು) ನಡೆಯಲಿದೆ.