*ಗೋಣಿಕೊಪ್ಪಲು, ಡಿ. 2: ಕೊಡಗು ಬಲಿಜ ಸಮಾಜದ ವತಿಯಿಂದ ‘ವರ್ಷಕ್ಕೊಂದು ಗ್ರಾಮೋತ್ಸವ’ ವಿನೂತನ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದ್ದು, ಪೆÇನ್ನಂಪೇಟೆಯ ರಂಗಭೂಮಿ ಕಲಾವಿದ ಟಿ.ಎನ್. ಶ್ರೀನಿವಾಸ ನಾಯ್ಡು ಅವರಿಗೆ ಸುಬ್ಬಯ್ಯ ನಾಯ್ಡು ರಂಗಕರ್ಮಿ ಪ್ರಶಸ್ತಿ ಮತ್ತು ಮೈಸೂರು ಯೋಗಾಲಯ ಸ್ಥಾಪಕ ಮೈಸೂರಿನ ಯೋಗ ವಿದ್ವಾನ್ ಆರ್. ರಂಗನಾಥ್ ಅವರಿಗೆ ಪತಂಜಲಿ ಪ್ರಶಸ್ತಿಯನ್ನು ನೀಡಿ ಗೌರವಿಸುವ ಉದ್ದೇಶವಿದೆ ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಾಲಜ್ಞಾನಿ ಕೈವಾರ ತಾತಯ್ಯ ಜಯಂತೋತ್ಸವವನ್ನು ಆಯೋಜಿಸುವ ಉದ್ದೇಶವಿದ್ದು, ವರ್ಷಕ್ಕೊಂದು ಗ್ರಾಮೋತ್ಸವದ ಸಂದರ್ಭ ಕೈವಾರ ತಾತಯ್ಯ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ನಡೆಸಲಾಗುವದು. ಪೆÇನ್ನಂಪೇಟೆ ಗ್ರಾಮದಲ್ಲಿ ಈವರೆಗೂ ಯಾವದೇ ಬಲಿಜ ಸಮಾಜ ಕಾರ್ಯಕ್ರಮ ನಡೆದಿರುವದಿಲ್ಲ. ಸುಮಾರು 13 ಬಲಿಜ ಕುಟುಂಬಗಳು ಪೆÇನ್ನಂಪೇಟೆಯಲ್ಲಿ ನೆಲೆಸಿದ್ದು ಕೊಡಗು ಕೈವಾರ ತಾತಯ್ಯ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ವೀರಾಜಪೇಟೆಯ ಬಳೆ ವರ್ತಕರಾದ ಎಸ್.ಕೆ. ಯತಿರಾಜ್ ಅವರನ್ನು ಆಯ್ಕೆಮಾಡಲಾಗಿದೆ. ಆಮಂತ್ರಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಂದೆ ನಾಪೆÇೀಕ್ಲು, ಶನಿವಾರಸಂತೆ ಮುಂತಾದ ಗ್ರಾಮಗಳಲ್ಲಿ ಕೈವಾರ ತಾತಯ್ಯ ಜಯಂತಿ ಆಚರಿಸಲಾಗುವದು ಎಂದರು.
ಕೋವಿಡ್-19 ನಿಯಂತ್ರಣಕ್ಕೆ ಬಂದ ನಂತರ ದ್ವಿತೀಯ ವರ್ಷದ ಕ್ರೀಡೋತ್ಸವವನ್ನು ನಡೆಸಲಾಗುವದು. ಕೊಡಗು ಬಲಿಜ ಸಮಾಜದ ಬಲಿಜ ಬಂಧುಗಳಿಗೆ ಆಹಾರದ ಕಿಟ್ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರೂ. 5 ಲಕ್ಷದವರೆಗೂ ವಿದ್ಯಾರ್ಥಿ ವೇತನವನ್ನು ರಾಜ್ಯ ಬಲಿಜ ಮುಖಂಡರ ಸಹಕಾರದೊಂದಿಗೆ ವಿತರಿಸಲಾಗಿದೆ. ಐಎಎಸ್ ಪರೀಕ್ಷಾ ಪೂರ್ವ ತರಬೇತಿಗಾಗಿ ನಾಪೆÇೀಕ್ಲುವಿನ ವರ್ಷಾ ಎಂಬವರಿಗೆ ರೂ. 50 ಸಾವಿರ ನಗದು ಪುರಸ್ಕಾರ ಈಗಾಗಲೇ ನೀಡಲಾಗಿದೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಟಿ.ಸಿ. ಗೀತಾ ನಾಯ್ಡು ಉಪಸ್ಥಿತರಿದ್ದರು.