ಸೋಮವಾರಪೇಟೆ, ಡಿ. 2: ಪಟ್ಟಣದ ಜೂನಿಯರ್ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಮದ್ಯಪಾನಿಗಳ ಹಾವಳಿ ಹೆಚ್ಚಾಗಿದ್ದು, ಪೆÇಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಇಲ್ಲಿನ ಜಿ.ಎಂ.ಪಿ. ಹಾಗೂ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ ರಾತ್ರಿ ವೇಳೆಯಲ್ಲಿ ಯುವಕರ ಗುಂಪು ಮದ್ಯಪಾನ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಸಂಜೆ ಹಾಗೂ ರಾತ್ರಿ ವಾಹನ ನಿಲ್ಲಿಸಿಕೊಂಡು ತಿಂಡಿ-ತಿನಿಸುಗಳನ್ನು ತಿಂದು ಅಲ್ಲಿಯೇ ಕಸ ಎಸೆಯಲಾಗುತ್ತಿದೆ. ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಕುಳಿತು ಮದ್ಯಪಾನ ಮಾಡಿ, ಬಾಟಲಿಗಳನ್ನು ಅಲ್ಲಿಯೇ ಒಡೆಯುತ್ತಿರುವದರಿಂದ ಬೆಳಿಗ್ಗೆ ಆಟವಾಡುವವರು, ವಾಕಿಂಗ್ ತೆರಳುವವರಿಗೆ ಬಾಟಲಿ ಚೂರುಗಳನ್ನು ಹೆಕ್ಕುವುದೇ ಕೆಲಸವಾಗುತ್ತಿದೆ. ರಾತ್ರಿ 7 ಗಂಟೆಯ ನಂತರ ಪೆÇಲೀಸರು ಒಂದೆರಡು ಬಾರಿ ಬೀಟ್ ಹಾಕುವ ಮೂಲಕ ಕುಡುಕ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.