ಮಡಿಕೇರಿ, ಡಿ. 2: ಕರ್ನಾಟಕ ಬೆಳೆಗಾರರ ಒಕ್ಕೂಟದ ನೂತನ ಪದಾಧಿಕಾರಿಗಳಲ್ಲಿ ಕೊಡಗಿನ ಇಬ್ಬರು ಬೆಳೆಗಾರ ಪ್ರಮುಖರಿಗೆ ಅವಕಾಶ ದೊರಕಿದೆ. ಕೆಜಿಎಫ್‍ನ ನೂತನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಡಾ|| ಹೆಚ್.ಟಿ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ. ಕೃಷ್ಣಪ್ಪ, ಖಜಾಂಚಿಯಾಗಿ ಎಂ.ಬಿ. ರಾಜೀವ್, ಉಪಾಧ್ಯಕ್ಷರಾಗಿ ಬಿ.ಎಂ. ನಾಗರಾಜು (ಹಾಸನ ಜಿಲ್ಲೆ), ನಂದಾ ಬೆಳ್ಳಿಯಪ್ಪ (ಕೊಡಗು ಜಿಲ್ಲೆ), ಎ.ಕೆ. ವಸಂತೇಗೌಡ (ಚಿಕ್ಕಮಗಳೂರು ಜಿಲ್ಲೆ) ಸಂಘಟನಾ ಕಾರ್ಯದರ್ಶಿಗಳಾಗಿ ಎ.ಎನ್. ನಾಗರಾಜು (ಹಾಸನ ಜಿಲ್ಲೆ), ಕೆ.ಕೆ. ವಿಶ್ವನಾಥ್ (ಕೊಡಗು ಜಿಲ್ಲೆ), ಕೆ.ವಿ. ನರೇಂದ್ರ (ಚಿಕ್ಕಮಗಳೂರು ಜಿಲ್ಲೆ) ಆಯ್ಕೆಯಾಗಿದ್ದಾರೆ.