ಕೂಡಿಗೆ, ಡಿ. 2: ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಹಾರಂಗಿಯಿಂದ ಕೊಡಗಿನ ಗಡಿ ಭಾಗದವರೆಗೆ ಹಾರಂಗಿ ನಾಲೆಯ ನೀರನ್ನು ಉಪಯೋಗಿಸಿ ನಾಟಿ ಮಾಡಿದ ಭತ್ತ ಬೆಳೆಯು ಕುಯ್ಲಿಗೆ ಬಂದಿದ್ದು, ಈಗಾಗಲೇ ಭತ್ತ ಬೆಳೆ ಕುಯ್ಲು ಕೆಲಸ ಆರಂಭವಾಗಿದೆ.

ಈ ವ್ಯಾಪ್ತಿಯ ರೈತರು ಹೈಬ್ರೀಡ್ ತಳಿಯ ಭತ್ತದ ಹೊಸ ಬೀಜಗಳನ್ನು ಬಿತ್ತನೆ ಮಾಡಿ ಬೇಸಾಯ ಮಾಡಿದ್ದರು. ಮೂರು ತಿಂಗಳ ಬೆಳೆ ಬಂದಿರುವುದರಿಂದ ಈ ಭಾಗದ ರೈತರು ಕುಯ್ಲು ಕೆಲಸದಲ್ಲಿ ತೊಡಗಿದ್ದಾರೆ. ತೊರೆನೂರು, ಶಿರಂಗಾಲ, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆ ಕೆಲಸ ಪ್ರಾರಂಭವಾಗಿದೆ.