ಚೆಟ್ಟಳ್ಳಿ, ಡಿ. 2: ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಅವರಿಗೆ ಚೆಟ್ಟಳ್ಳಿಯ ಪುತ್ತರಿರ ಕುಟುಂಬಸ್ಥರು ಐನ್ಮನೆಯಲ್ಲಿ ಸನ್ಮಾಸಿ ಗೌರವಿಸಿದರು. ಪತ್ರಿಕಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತಿದ್ದು, ಪತ್ರಕರ್ತರ ಸಂಘದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಕರುಣ್ ಕಾಳಯ್ಯನಿಗೆ ಕುಟುಂಬದ ಹಿರಿಯರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಅದೇರೀತಿ ಪತ್ರಿಕಾ ಕ್ಷೇತ್ರ ಹಾಗೂ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸುತಿರುವ ಪುತ್ತರಿರ ಪಪ್ಪು ತಿಮ್ಮಯ್ಯ ಅವರನ್ನೂ ಅಭಿನಂದಿಸಿದರು. ಕುಟುಂಬದ ಹಿರಿಯರಾದ ಪುತ್ತರಿರ ಗಣೇಶ್ ಹಾಗೂ ಕುಟುಂಬ ಸದಸ್ಯರುಗಳು ಇದ್ದರು.