ಚೆಟ್ಟಳ್ಳಿ, ಡಿ. 2: ಸಿದ್ದಾಪುರ ಸುನ್ನಿ ಯುವಜನ ಸಂಘ ಇದರ ಕೊಡಗು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಿದ್ದಾಪುರ ವರಕ್ಕಲ್ ಪೂಕೋಯ ತಂಙಳ್ ಸ್ಮಾರಕ ಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸಿಪಿಎಂ ಬಶೀರ್ ಹಾಜಿ, ಉಪಾಧ್ಯಕ್ಷರುಗಳಾಗಿ ಮೊಹಮ್ಮದ್ ಅಲಿ, ರಫೀಕ್, ಇಬ್ರಾಹಿಂ ಹಾಜಿ, ಹಂಸ ಹಾಜಿ, ರಫೀಕ್ ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಎಂ.ವೈ. ಅಶ್ರಫ್ ಫೈಜಿ, ಕಾರ್ಯನಿರತ ಕಾರ್ಯದರ್ಶಿಯಾಗಿ ಸಿ.ಎಂ. ಹಮೀದ್ ಮೌಲವಿ ಸಹ ಕಾರ್ಯದರ್ಶಿಗಳಾಗಿ ಅಬೂಬಕರ್ ಮುಸ್ಲಿಯಾರ್, ಮಾಹಿನ್ ಹಾಜಿ, ಕೆ. ಈಸಾ, ಮೊಹಮ್ಮದ್ ಹಾಜಿ ಆಯ್ಕೆಯಾಗಿದ್ದಾರೆ. ಆರ್ಗನೈಸರ್ ಆಗಿ ಇಕ್ಬಾಲ್ ಮೌಲವಿ, ಕೆ.ಸಿ. ಮೊಯ್ದೀನ್, ನೌಶಾದ್ ಪಿ.ಯು. ಹಾಗೂ 52 ಸದಸ್ಯರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಜಿ ವಹಿಸಿ ಮಾತನಾಡಿದರು.
ಬಶೀರ್ ಹಾಜಿ ಸಭೆಯನ್ನು ಉದ್ಘಾಟಿಸಿದರು. ಲತೀಫ್ ಹಾಜಿ ಬೆಂಗಳೂರು, ಎಸ್.ವೈ.ಎಸ್. ರಾಜ್ಯ ನಾಯಕರಾದ ಉಮ್ಮರ್ ಫೈಜಿ, ಆರಿಫ್ ಫೈಝಿ, ಇಕ್ಬಾಲ್ ಮೌಲವಿ ಹಾಗೂ ಇನ್ನಿತರರು ಇದ್ದರು.