ವೀರಾಜಪೇಟೆ, ಡಿ.1: ವೀರಾಜಪೇಟೆ ಬಳಿಯ ತೋರ ಗ್ರಾಮದಲ್ಲಿ ನಿನ್ನೆ ದಿನ ಸಂಜೆ ಕೆರೆಯಲ್ಲಿ ಸ್ನಾನ ಮಾಡಲೆಂದು ತೆರಳಿದ ಲೋಕೇಶ್ (18) ಎಂಬಾತ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ದೊರೆತ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ಹುತ್ತರಿ ಹಬ್ಬದ ಪ್ರಯುಕ್ತ ವೀರಾಜಪೇಟೆಗೆ ಬಂದು ಹಿಂತಿರುಗಿದ ಲೋಕೇಶ್ ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಈ ದುರಂತ ಸಂಭವಿಸಿದೆ. ಲೋಕೇಶ್ನ ತಂದೆ ಸೋಮಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.