ಕೂಡಿಗೆ, ಡಿ. 1: ಕುಶಾಲನಗರ ಪ.ಪಂ. ವ್ಯಾಪ್ತಿಯ ಕಸ ವಿಲೇವಾರಿ ಘಟಕವನ್ನು ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಪ್ರಾರಂಭಿಸಲಾಗಿತ್ತು. ಇಂದಿನವರೆಗೂ ಒಂದಲ್ಲಾ ಒಂದು ಸಮಸ್ಯೆ ಎದುರಿ ಸುತ್ತಿದ್ದ ಸ್ಥಳೀಯರು ದುರ್ವಾಸನೆ ಮತ್ತು ಸೊಳ್ಳೆಗಳ ಕಾಟದಿಂದ ಪರದಾಡುತ್ತಿದ್ದರು. ಸಮೀಪದ ಜಮೀನಿಗೆ ಪ್ಲಾಸ್ಟಿಕ್ ಹಾರುವುದು, ಆಹಾರದ ಪೆÇಟ್ಟಣ ಗಳನ್ನು ನಾಯಿಗಳು ಎಳೆದಾಡಿ ಮನೆಗಳ ಹತ್ತಿರ ಬಿಡುವುದು ಎಂಬೆಲ್ಲಾ ದೂರು ಗಳು ಸ್ಥಳೀಯ ರಿಂದ ಬಂದಿದ್ದು, ಜಿಲ್ಲಾಧಿಕಾರಿ ಮತ್ತು ಶಾಸಕರಿಗೂ ದೂರು ನೀಡಿ ಪ್ರತಿಭಟಿಸುವುದಾಗಿ ಸ್ಥಳೀಯರು ಪತ್ರಿಕೆಯ ಮೂಲಕ ಹೇಳಿಕೆ ನೀಡಿದ್ದರು.
ಜನರ ಈ ಸಮಸ್ಯೆ ಕುರಿತು ‘ಶಕ್ತಿ’ ವರದಿ ಪ್ರಕಟಿಸಿತ್ತು. ಇದನ್ನು ಆದÀರಿಸಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ಅಧ್ಯಕ್ಷ ಜಯವರ್ಧನ್ ಅವರು ಸುದ್ದಿಗಾರ ರೊಂದಿಗೆ ಮಾತನಾಡುತ್ತ, ಪ.ಪಂ.ಯ ಪ್ರಮುಖ ಸಮಸ್ಯೆಯಾಗಿರುವ ಕಸ ವಿಲೇವಾರಿ ಘಟಕವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಅಡಿಯಲ್ಲಿ ರೂ. 3.71 ಕೋಟಿ ಕ್ರಿಯಾಯೋಜನೆ ಸಿದ್ಧಗೊಂಡಿದ್ದು, ಮುಂದಿನ ದಿನಗಳಲ್ಲಿ ಭುವನಗಿರಿ ಕಸ ವಿಲೇವಾರಿ ಕೇಂದ್ರದಲ್ಲಿ ಸುಸಜ್ಜಿತವಾದ ಕಟ್ಟಡ ಮತ್ತು ಅದಕ್ಕೆ ಬೇಕಾಗುವ ಆಧುನಿಕ ತಂತ್ರಜ್ಞಾನದ ಮೂಲಕ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತದೆ. ಯಾವುದೇ ರೀತಿಯಲ್ಲಿ ಹೊರಗಡೆಗೆ ವಾಸನೆ ಬಾರದ ಹಾಗೆ ನೂತನ ಶೈಲಿಯ ಯಂತ್ರಗಳುನ್ನು ಅಳವಡಿಸುವ ಮೂಲಕ ಹೊಸ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು.
ಈ ಕೇಂದ್ರವು ಏಳು ಎಕರೆಗಳಷ್ಟು ಪ್ರದೇಶದ ವಿಸ್ತೀರ್ಣವನ್ನು ಹೊಂದಿರುವ ಜಾಗವಾಗಿದ್ದು, ಒಣ ಕಸ, ಹಸಿ ಕಸಗಳನ್ನು ಬೇರ್ಪಡಿಸುವ ನೂತನ ಮಾದರಿ ಯಂತ್ರ ಅಳವಡಿಕೆಗೆ ಬೆಂಗಳೂರು ಅಥವಾ ಕೇರಳ ರಾಜ್ಯದ ಕೆಲ ಜಿಲ್ಲಾ ಕೇಂದ್ರಗಳ ಕಸ ವಿಲೇವಾರಿ ಘಟಕದ ಕೇಂದ್ರಗಳಿಗೆ ನಮ್ಮ ತಂಡ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ನೋಡಿ ಅದರ ಅನ್ವಯ ಉತ್ತಮ ಗುಣಮಟ್ಟದ ಯಂತ್ರಗಳನ್ನು ಅಳವಡಿಸಲು ಪ್ರಯತ್ನ ಮಾಡುವುದಾಗಿ, ಅಲ್ಲದೆ ಸಮೀಪದ ಜಮೀನಿನ ರೈತರಿಗೆ ಯಾವುದೆ ತೊಂದರೆಗಳು ಆಗದಂತೆ ಕ್ರಮವಹಿಸ ಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಪ.ಪಂ. ಉಪಾಧ್ಯಕ್ಷೆ ಸುರಯಾ ಬಾನು, ಪ.ಪಂ. ಮುಖ್ಯಾಧಿಕಾರಿ ಸುಜಯ್ ಕುಮಾರ್, ಇಂಜಿನಿಯರ್ ಶ್ರೀದೇವಿ, ನಟರಾಜ್, ಆರೋಗ್ಯ ಅಧಿಕಾರಿ ಉದಯಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
-ಕೆ.ಕೆ. ನಾಗರಾಜಶೆಟ್ಟಿ