ಗೋಣಿಕೊಪ್ಪ ವರದಿ, ನ. 28: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 20019-20ನೇ ಸಾಲಿನಲ್ಲಿ ರೂ. 46.38 ಲಕ್ಷ ಲಾಭ ಬಂದಿದ್ದು, ಸದಸ್ಯರಿಗೆ ಶೇ. 18 ಡೆವಿಡೆಂಟ್ ನೀಡಲಾಗುವುದು ಎಂದು ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ರಾಮಕೃಷ್ಣ ಘೋಷಿಸಿದರು.
ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿ ಸಿದ್ದ ಸಂಘದ ಮಹಾಸಭೆಯಲ್ಲಿ ಮಾತನಾಡಿ, ಸಂಘದ ಪ್ರಗತಿಯ ಬಗ್ಗೆ ತಿಳಿಸಿದರು.
ಕೋವಿಡ್ ಹಾಗೂ ಪ್ರವಾಹದ ನಡುವೆ ಸಂಘ ರೂ. 82.40 ಕೋಟಿ ವ್ಯವಹಾರ ನಡೆಸಿದೆ. ರೂ. 10.07 ಲಕ್ಷ ವ್ಯಾಪಾರದೊಂದಿಗೆ ರೂ. 46.38 ಲಕ್ಷ ನಿವ್ವಳ ಲಾಭ ಪಡೆದು ಪ್ರಗತಿಯತ್ತ ಸಾಗುತ್ತಿದೆ ಎಂದು ತಿಳಿಸಿದರು.
ರೂ. 20.65 ಕೋಟಿ ದುಡಿಯುವ ಬಂಡವಾಳದೊಂದಿಗೆ, ರೂ. 10 ಕೋಟಿ ಠೇವಣಿ ಸಂಗ್ರಹ ಮಾಡಲಾಗಿದೆ. ರೂ. 7.75 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. ಒಟ್ಟು ರೂ. 13.50 ಕೋಟಿ ವಿವಿಧ ರೂಪದಲ್ಲಿ ಸಾಲ ನೀಡಲಾಗಿದೆ. ರೂ. 5.69 ಕೋಟಿ ಹೂಡಿಕೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಮಾದರಿ ಸಂಘವಾಗಿ ಮುನ್ನಡೆಯುತ್ತಿದೆ ಎಂದರು.
ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲು ಮರೂರು ಕೃಷಿ ಪ್ರಾಂಗಣದಲ್ಲಿ ಈಗಾಗಲೇ ಕೆರೆ ಮತ್ತು ತುಂತುರು ನೀರಾವರಿ ಯೋಜನೆಯಿಂದ ಹೆಚ್ಚು ಪ್ರಯೋಜನವಾಗುತ್ತಿದೆ. ಇದರಂತೆ ತಿತಿಮತಿ ಪಟ್ಟಣದಲ್ಲಿ ಸಂಘಕ್ಕೆ ಖರೀದಿಸಿರುವ ಜಾಗದಲ್ಲಿ ನಬಾರ್ಡ್ ಬಹುಸೇವಾ ಯೋಜನೆಯಂತೆ ಸೂಪರ್ ಮಾರ್ಕೆಟ್, ಸೇವಾ ಕೇಂದ್ರ ತೆರೆಯಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಈ ಸಂದರ್ಭ ಸಂಘದ ಸ್ಥಾಪನಾ ದಿವಸವನ್ನು ಆಚರಿಸಲಾಯಿತು. ಹಿರಿಯರಾದ ಕೆ.ಸಿ. ಸೋಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಉಪಾಧ್ಯಕ್ಷ ಪಿ.ಜೆ. ನಂಜಪ್ಪ, ಸಿ.ಎಂ. ಅಚ್ಚಯ್ಯ, ಬಿ.ಬಿ. ಚೆಂಗಪ್ಪ, ಎಸ್.ವಿ. ಚಂದ್ರಶೇಖರ್, ಹೆಚ್.ಬಿ. ಗಣೇಶ್, ಹೆಚ್.ಡಿ. ಲಕ್ಷಮಮ್ಮ, ಜಿ.ಎನ್. ಜಯಮ್ಮ, ಯು.ಎಂ. ಸವಿತಾ, ಕೆ.ಕೆ. ಪದ್ಮನಾಭ, ಹೆಚ್.ಜಿ. ಗೋವಿಂದಾ, ಎಂ.ಎಂ. ಮಹೇಶ್, ಎಂ.ಎ. ಮಂಜುಳ, ಜಿಲ್ಲಾ ಸಹಕಾರ ಸಂಘದ ವ್ಯವಸ್ಥಾಪಕ ಆಂಟನಿ, ಮೇಲ್ವಿಚಾರಕ ಶಂಕರ್, ಸಂಘದ ಸಿಇಒ ವಿ.ಎಸ್. ಸುಬ್ರಮಣಿ ಉಪಸ್ಥಿತರಿದ್ದರು. ಪವಿತಾ ಹಾಗೂ ತಂಡ ಪ್ರಾರ್ಥಿಸಿದರು.