ಕುಶಾಲನಗರ, ನ. 28: ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆಯ ಕುಶಾಲನಗರ ಘಟಕದ ಅಧ್ಯಕ್ಷರಾಗಿ ಪಿ. ಶಿವಕುಮಾರ್ ಮತ್ತು ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಕೆ.ಪಿ. ರಷಿದಾ ಅವರನ್ನು ನೇಮಕ ಮಾಡಲಾಗಿದೆ. ಕುಶಾಲನಗರದಲ್ಲಿ ನಡೆದ ವೇದಿಕೆಯ ಸಭೆಯು ರಾಜ್ಯಾಧ್ಯಕ್ಷ ಡಾ. ಅಶ್ವಥ್ ಅವರ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭ ವೇದಿಕೆಯ ಪ್ರಮುಖರಾದ ಕೆ.ಟಿ .ಶ್ರೀನಿವಾಸ್, ಸಿ.ಎಂ. ಮಲ್ಲಿಕಾರ್ಜುನ್, ಉದಯ ಮುತ್ತೂರು, ಕೆ.ಪಿ. ಕುಮಾರ್ ಮತ್ತಿತರರು ಇದ್ದರು.