ಗೋಣಿಕೊಪ್ಪ ವರದಿ, ನ. 28: ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಆಕ್ಸ್ ಸ್ಪೋಟ್ಸ್, ಎಂಟರ್‍ಟೈನ್‍ಮೆಂಟ್ ಸಹಯೋಗ ದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ರಿಂಕ್ ಹಾಕಿ ಹಾಗೂ ಫುಟ್ಬಾಲ್‍ನಲ್ಲಿ ಶನಿವಾರದ ಪಂದ್ಯಗಳಲ್ಲಿ ಒಟ್ಟು 32 ತಂಡಗಳು ಗೆಲುವು ಪಡೆದು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ಹಾಕಿ ಫಲಿತಾಂಶ: ಕಂಬೀರಂಡವು ಅಪ್ಪಚ್ಚೀರವನ್ನು 9-4 ಗೋಲುಗಳಿಂದ ಸೋಲಿಸಿತು. ಕಂಬೀರಂಡ ಯೋಗೇಶ್ ಅಪ್ಪಯ್ಯ 5, ಮಯೂರ್ ಬೋಪಯ್ಯ 2, ಬೋಪಣ್ಣ 2, ಅಪ್ಪಚ್ಚೀರ ಅಯ್ಯಪ್ಪ 2, ಬೋಪಯ್ಯ 2 ಗೋಲು ಹೊಡೆದರು.

ಕಾಯಪಂಡ ತಂಡವು ಕೋಣೇರಿರ ವಿರುದ್ಧ 5-0 ಗೋಲುಗಳಿಂದ ಜಯಿಸಿತು. ಕಾಯಪಂಡ ಪ್ರಗಾನ್ 4, ಪ್ರತಿಕ್ 1 ಗೋಲು ಹೊಡೆದು ಮಿಂಚಿದರು.

ಐಚ್ಚೇಟೀರವು ಚೆಪ್ಪುಡೀರವನ್ನು 2-1 ಗೋಲುಗಳಿಂದ ಸೋಲಿಸಿತು. ಐಚೇಟೀರ ಹೃತಿಕ್, ಲೆಹರ್, ಚೆಪ್ಪುಡೀರ ದಿವಾನ್ ಸುಬ್ಬಯ್ಯ ಗೋಲು ಬಾರಿಸಿದರು.

ಮಲ್ಚೀರ ತಂಡವು ಬಾಚೀರವನ್ನು 4-3 ಗೋಲುಗಳಿಂದ ಮಣಿಸಿತು. ಮಲ್ಚೀರ ಶಾನ್ ಬೋಪಯ್ಯ 4, ಬಾಚೀರ ಸಚಿನ್, ಸ್ವಾಗತ್, ಚಂಗಪ್ಪ ಗೋಲು ಹೊಡೆದರು.

ಪೋರಂಗಡ ತಂಡ ಗೈರು ಹಾಜರಿಯಿಂದಾಗಿ ಕೊಂಗಂಡ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಪೆಮ್ಮಂಡ ತಂಡವು ಕುಂಬೇರವನ್ನು 6-5 ಗೋಲುಗಳಿಂದ ಮಣಿಸಿತು. ಪೆಮ್ಮಂಡ ಎ. ಸೋಮಣ್ಣ 3, ವಿ. ಸೋಮಣ್ಣ, ದೃವ್, ರೋಶನ್ ಪೆಮ್ಮಯ್ಯ, ಕುಂಬೇರ ಆಧ್ಯತ್ 4, ಶಮನ್ ಗೋಲು ಹೊಡೆದರು.

(ಕಡಗದಾಳ್) ಮುಕ್ಕಾಟೀರ ತಂಡವು ಕಟ್ಟೇರ ವಿರುದ್ಧ 5-1 ಗೋಲುಗಳಿಂದ ಜಯಿಗಳಿಸಿತು. ಮುಕ್ಕಾಟೀರ ಪರ ಬೋಪಣ್ಣ, ನಾಣಯ್ಯ 4, ಕಟ್ಟೇರ ಸುನಿಲ್ ಸುಬ್ಬಯ್ಯ ಗೋಲು ಹೊಡೆದರು.

ಕೂತಂಡ ತಂಡವು ಕೊಲ್ಲೀರ ತಂಡವನ್ನು 4-2 ಗೋಲುಗಳಿಂದ ಮಣಿಸಿತು. ಕೂತಂಡ ಬೋಪಣ್ಣ 2, ಸಂತೋಷ್, ಸಚಿನ್ ಕುಟ್ಟಯ್ಯ, ಕೊಲ್ಲೀರ ಸೋಮಣ್ಣ 2 ಗೋಲು ಬಾರಿಸಿದರು.

ಮಾಚಿಮಾಡ ತಂಡವು ಅಲ್ಲುಮಾಡ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಮಾಚಿಮಾಡ ಕಾರ್ಯಪ್ಪ 2, ನಿಕಿಲ್, ಚರಣ್, ಅಲ್ಲುಮಾಡ ಗೌತಮ್ ಗೋಲು ಹೊಡೆದರು.

ಚೆಕ್ಕೇರ ತಂಡವು ಸಡನ್‍ಡೆತ್‍ನಲ್ಲಿ 7-6 ಗೋಲುಗಳ ಮೂಲಕ ಮುರುವಂಡ ವಿರುದ್ಧ ಜಯ ಸಾಧಿಸಿತು. ಚೆಕ್ಕೇರ ಶಿಯಾನ್ ಬೋಪಣ್ಣ 2, ಅದರ್ಶ್, ಮುರುವಂಡ ಕಾರ್ಯಪ್ಪ 3 ಗೋಲು ಬಾರಿಸಿದರು.

ಕಾಡ್ಯಮಾಡ ತಂಡ 6-1 ಗೋಲುಗಳಿಂದ ಗಾಂಡಂಗಡವನ್ನು ಮಣಿಸಿತು. ಕಾಡ್ಯಮಾಡ ಅಯ್ಯಪ್ಪ 2, ಮುತ್ತಪ್ಪ 2, ಶ್ರವಣ್ 2, ಗಾಂಡಂಗಡ ಸಚಿನ್ 1 ಗೋಲು ಹೊಡೆದು ಮಿಂಚಿದರು.

ನೆಲ್ಲಮಕ್ಕಡ ತಂಡವು ಐನಂಡವನ್ನು 7-2 ಗೋಲುಗಳಿಂದ ಸೋಲಿಸಿತು. ನೆಲ್ಲಮಕ್ಕಡ ಪೂವಣ್ಣ 3, ಸೋಮಯ್ಯ 2, ರೋಹನ್ ಬೋಪಣ್ಣ 2, ಐನಂಡ ಪೂವಣ್ಣ, ನಾಚಪ್ಪ ತಲಾ ಒಂದೊಂದು ಗೋಲು ಹೊಡೆದರು.

ನಂಬುಡುಮಾಡ ತಂಡವು 9-0 ಗೋಲುಗಳಿಂದ ಐಯ್ಯಮಾಡ ವಿರುದ್ಧ ಜಯಿಸಿತು. ನಂಬುಡುಮಾಡ ನಿಹಾಲ್ ಅಚ್ಚಯ್ಯ 5 ಗೋಲು ಹೊಡೆದು ಮಿಂಚು ಹರಿಸಿದರು. ತಿಮ್ಮಯ್ಯ 2, ಜೆಮ್ಸಿ, ದಿತಿನ್ ಬೋಪಯ್ಯ ಗೋಲು ಬಾರಿಸಿದರು.

ಮೇಕೇರಿರ ತಂಡವು ಪಾಲಂದೀರ ವಿರುದ್ಧ 7-3 ಗೋಲುಗಳ ಗೆಲುವು ಸಾಧಿಸಿತು. ಅಂತರ್ರಾಷ್ಟ್ರೀಯ ಆಟಗಾರ ನಿತಿನ್ ತಿಮ್ಮಯ್ಯ 3, ಅಭಿನವ್ ಗಣಪತಿ 3, ಸಯನಾ, ಪಾಲಂದೀರ ಅಪ್ಪಚ್ಚು 2, ಸುನಿಲ್ ಗೋಲು ಹೊಡೆದರು.

ಅಪ್ಪಂಡೇರಂಡ ತಂಡವು ಒಡಿಯಂಡ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಅಪ್ಪಂಡೇರಂಡ ವಿನೇಶ್ ಪೂವಯ್ಯ 2, ಬೋಪಣ್ಣ, ವರುಣ್, ಒಡಿಯಂಡ ಬೋಪಣ್ಣ, ಪೊನ್ನಣ್ಣ ಗೋಲು ಬಾರಿಸಿದರು.

ಚಂದುರ ತಂಡ ಅಮ್ಮಣಿಚಂಡ ವನ್ನು 5-1 ಗೊಲುಗಳಿಂದ ಮಣಿಸಿತು. ಚಂದುರ ಪೊನ್ನಣ್ಣ 3, ಪೂವಣ್ಣ, ಪ್ರಶಾಂತ್, ಅಮ್ಮಣಿಚಂಡ ಬೆವನ್ ಬೋಪಣ್ಣ ಗೋಲು ಹೊಡೆದರು.

ಮಾಚಂಗಡ ತಂಡವು 5-2 ಗೋಲುಗಳಿಂದ ಶಾಂತೆಯಂಡವನ್ನು ಮಣಿಸಿತು. ಮಾಚಂಗಡ ಅಯ್ಯಪ್ಪ 3, ದರ್ಶನ್ 2, ಶಾಂತೆಯಂಡ ಕರಣ್ 1 ಗೋಲು ಬಾರಿಸಿದರು.

ಅಂಜಪರವಂಡ ತಂಡವು ಶಿವಚಾಳಿಯಂಡವನ್ನು ಸಡನ್ ಡೆತ್‍ನಲ್ಲಿ 5-3 ಗೋಲುಗಳಿಂದ ಸೋಲಿಸಿತು. ಅಂಜಪರವಂಡ ದೀಪಕ್, ಜಿತನ್, ಶಿವಚಾಳಿಯಂಡ ಸುಜನ್, ರಿಜು ಗೋಲು ಹೊಡೆದು ಮಿಂಚಿದರು.

ಇಟ್ಟೀರಕ್ಕೆ ತಾತಂಡ ವಿರುದ್ಧ 8-3 ಗೋಲುಗಳ ಗೆಲುವು ದೊರೆಯಿತು. ಇಟ್ಟೀರ ರೋಹನ್ 3, ಕುಟ್ಟಪ್ಪ 2, ಅಚ್ಚಪ್ಪ 2, ತಾತಂಡ ಬೋಪಣ್ಣ, ಬ್ರೆನಿಶ್ ಗೋಲು ಬಾರಿಸಿದರು.

ಪುಟ್ಬಾಲ್: ಜಮ್ಮಡ ತಂಡ 2-1 ಗೋಲುಗಳಿಂದ ಕಾಡ್ಯಮಾಡವನ್ನು ಮಣಿಸಿತು. ಜಮ್ಮಡ ಅದೀಶ್ ಅಚ್ಚಯ್ಯ, ಅಕ್ಷತ್, ಕಾಡ್ಯಮಾಡ ಶಿಶಿರ್ ಗೋಲು ಬಾರಿಸಿದರು.

ಕಳ್ಳಿಚಂಡ ತಂಡವು ಕುಲ್ಲೇಟೀರವನ್ನು ಟೈಬ್ರೇಕರ್‍ನಲ್ಲಿ 4-3 ಗೋಲುಗಳಿಂದ ಸೋಲಿಸಿತು. ಕಳ್ಳಿಚಂಡ ತರುಣ್, ಕುಲ್ಲೇಟೀರ ಹರ್ಷಿತ್ ಗೋಲು ಹೊಡೆದರು.

ಕೊಲ್ಲೀರ ತಂಡ ಚೇಂದಂಡವನ್ನು 4-2 ಗೋಲುಗಳಿಂದ ಮಣಿಸಿತು. ಕೊಲ್ಲೀರ ಅಪ್ಪಚ್ಚು, ಗೌತಂ, ಚೇಂದಂಡ ವರುಣ್ ಗೋಲು ಹೊಡೆದರು.

ಕೆಚ್ಚೇಟೀರ ತಂಡವು ಅಜ್ಜಿನಿಕಂಡವನ್ನು 4-0 ಗೋಲುಗಳಿಂದ ಸೋಲಿಸಿತು. ಅಜ್ಜಿನಿಕಂಡ ನಿಶಾಂತ್ 3, ಪ್ರೀತಮ್ 1 ಗೋಲು ಹೊಡೆದರು.

ಮಾಚಂಗಡ ತಂಡವು ಅರೆಯಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ಮಂದಣ್ಣ 2, ಮೋಹನ್, ನಿತಿನ್ ಗೋಲು ಹೊಡೆದರು.

ಕೊಟ್ಟಂಗಡ ತಂಡ ಚೆರ್ಮಂದಂಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಕೊಟ್ಟಂಗಡ ಪ್ರಗತ್, ಸೋಮಣ್ಣ, ಚೆರ್ಮಂದಂಡ ಕವನ್ ಗೋಲು ಹೊಡೆದರು.

ಕಾಂಡಂಡವು ಪಟ್ಟಡವನ್ನು 4-3 ಗೋಲುಗಳಿಂದ ಮಣಿಸಿತು. ಕಾಂಡಂಡ ಶರನ್ 4, ಪಟ್ಟಡ ಬೆಳ್ಯಪ್ಪ 3 ಗೋಲು ಬಾರಿಸಿದರು.

ಬಲ್ಲಚಂಡವು ಮುಕ್ಕಾಟೀರ ವಿರುದ್ಧ 7-6 ಗೋಲುಗಳಿಂದ ಟೈಬ್ರೇಕರ್‍ನಲ್ಲಿ ರೋಚಕ ಗೆಲುವು ದಾಖಲಿಸಿತು. ಬಲ್ಲಚಂಡ ಅಯ್ಯಪ್ಪ 2, ಮುಕ್ಕಾಟೀರ ಕುಟ್ಟಪ್ಪ, ದರ್ಶನ್ ಗೋಲು ಹೊಡೆದರು.

ಮಲ್ಚೀರ ತಂಡದ ಆಟಗಾರ ಶಾನ್ ಬೋಪಯ್ಯ ಬಾರಿಸಿದ ಏಕೈಕ ಗೋಲಿನಿಂದ ಕನ್ನಂಡ ತಂಡ ಸೋಲನುಭವಿಸಿತು.

ಕುಟ್ಟೇಟೀರ ತಂಡವು ಚೆಕ್ಕೇರವನ್ನು 3-2 ಗೋಲುಗಳಿಂದ ಮಣಿಸಿತು. ಚೆಕ್ಕೇರ ರೋನಿತ್, ಕುಟ್ಟೇಟೀರ ನಂಜಪ್ಪ ಗೋಲು ಹೊಡೆದರು.

ನೆರ್ಪಂಡ ತಂಡ ಅಮ್ಮಾಟಂಡ ವಿರುದ್ಧ 6-0 ಗೋಲುಗಳಿಂದ ಜಯಿಸಿತು. ನೆರ್ಪಂಡ ಕಾರ್ತಿಕ್ 2, ಕುಟ್ಟಯ್ಯ, ಕಾರ್ಯಪ್ಪ, ಬೋಪಣ್ಣ, ಶುಭಂ ಗೋಲು ಬಾರಿಸಿದರು.

ಕೋದೇಂಗಡ ತಂಡವು ಪಡೆಯಂಡವನ್ನು 3-1 ಗೋಲಿನಿಂದ ಸೋಲಿಸಿತು. ಕೋದೇಂಗಡ ದಿಲ್, ದಿವಿನ್ 2, ಪಾಡೆಯಂಡ ಪೊನ್ನಣ್ಣ ಗೋಲು ಬಾರಿಸಿದರು.

ಚೌರೀರ ತಂಡದ ಆಟಗಾರ ನಿರನ್ ಮಂದಣ್ಣ ಬಾರಿಸಿದ ಏಕೈಕ ಗೋಲಿನಿಂದ ಮೂಕೊಂಡ ವಿರುದ್ಧ 1-0 ಗೋಲಿನಿಂದ ಜಯಿಸಿತು.

ಐಚೇಟೀರ ತಂಡವು ಅಲ್ಲುಮಾಡ ವನ್ನು 3-1 ಗೋಲುಗಳಿಂದ ಸೋಲಿಸಿತು. ಐಚೇಟೀರ ಗಣಪತಿ 2, ಸೋಮಯ್ಯ, ಅಲ್ಲುಮಾಡ ನಿಶಾನ್ ಗೋಲು ಹೊಡೆದರು.